ದೆಹಲಿ ಜನತೆಯಿಂದ ಸಮ-ಬೆಸ ಸಾರಿಗೆ ಯೋಜನೆ ಜಾರಿ ನಿರ್ಧಾರ: ಕೇಜ್ರಿವಾಲ್

ಸೋಮವಾರ, 25 ಜನವರಿ 2016 (15:41 IST)
ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಯ ಬಗ್ಗೆ ಜನತೆಯ ಅಭಿಪ್ರಾಯ ತಿಳಿಯಲು ನಗರಾದ್ಯಂತ ಜನಸಭಾಗಳನ್ನು ಆಯೋಜಿಸಲಾಗುವುದು, ಜನತೆಯ ಅಭಿಪ್ರಾಯಗಳಿಗೆ ಸ್ಪಂದಿಸಿ ಜಾರಿಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ಕಳೆದ ಜನೆವರಿ 1 ರಿಂದ 15 ರವರೆಗೆ ಜಾರಿಗೊಳಿಸಲಾಗಿದ್ದ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಕುರಿತಂತೆ ಪ್ರತಿಯೊಬ್ಬ ಆಮ್ ಆದ್ಮಿ ಪಕ್ಷದ ಶಾಸಕ ತನ್ನ ಕ್ಷೇತ್ರದಲ್ಲಿ ಜನಸಭಾ ನಡೆಸಿ ಜನತೆಯ ಅಭಿಪ್ರಾಯಗಳನ್ನು ಪಡೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ. 
 
ಜನತೆ ಯಾವಾಗ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಗೊಳಿಸಬೇಕು ಎಂದು ಮಾಹಿತಿ ನೀಡಿದಲ್ಲಿ ಅದರಂತೆ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ. 
 
ದೆಹಲಿ ಪೊಲೀಸರು, ದೆಹಲಿ ಅಗ್ನಿಶಾಮಕ ದಳ, ಎನ್‌ಸಿಸಿ, ಶಾಲಾ ವಿದ್ಯಾರ್ಥಿಗಳಿಂದ ಗೌರವ ವಂದನೆ ಪಡೆದ ನಂತರ ಸಿಎಂ ಕೇಜ್ರಿವಾಲ್ ಧ್ವಜಾರೋಹಣ ನೆರವೇರಿಸಿದರು. ನಂತರ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಚಾಲನೇ ನೀಡಲಾಯಿತು.
 
ಸಮ-ಬೆಸ ಸಾರಿಗೆ ಯೋಜನೆ ಜಾರಿಗೆ ತಂದಾಗ ಮಾಲಿನ್ಯ ವೈಪರೀತ್ಯ ನಿಯಂತ್ರಣದಲ್ಲಿತ್ತು. ಮುಂಬರುವ ದಿನಗಳಲ್ಲಿ ಸುಧಾರಿತ ಸಮ-ಬೆಸ ಸಂಖ್ಯೆ ಸಾರಿಗೆ ಯೋಜನೆ ಜಾರಿಗೊಳಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ