ಇಂದಿನಿಂದ ತಮಿಳುನಾಡಿನಲ್ಲಿ ಕೋಕಾ ಕೋಲಾ, ಪೆಪ್ಸಿ ಮಾರಾಟವಿಲ್ಲ

ಬುಧವಾರ, 1 ಮಾರ್ಚ್ 2017 (17:04 IST)
ಇಂದಿನಿಂದ ತಮಿಳುನಾಡಿನಲ್ಲಿ ಕೋಕಾ ಕೋಲಾ, ಪೆಪ್ಸಿ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳ ತಂಪು ಪಾನೀಯಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಮಾರ್ಚ್ ೧ರಿಂದ ರಾಜ್ಯದಲ್ಲಿ ಪೆಪ್ಸಿ ಮತ್ತು ಕೋಕ ಕೋಲಾದ ಉತ್ಪನ್ನಗಳನ್ನು ಮಾರದೇ ಇರಲು ಅಲ್ಲಿನ ವ್ಯಾಪಾರಿಗಳ ಸಂಘಟನೆ ನಿರ್ಧರಿಸಿದೆ.

ಭಾರತೀಯ ಬ್ರಾಂಡ್‌ಗಳ ಉತ್ತೇಜನ ನೀಡುವ ಉದ್ದೇಶ, ರಾಸಾಯನಿಕಗಳನ್ನೊಳಗೊಂಡ ಈ ತಂಪು ಪಾನೀಯಗಳು ಆರೋಗ್ಯಕ್ಕೆ ಮಾರಕವಾಗಿರುವುದು, ಈ ತಂಪು ಪಾನೀಯಗಳ ಉತ್ಪಾದನೆಗೆ ಅಪಾರ ಪ್ರಮಾಣದ ನೀರು ಉಪಯೋಗವಾಗುತ್ತಿರುವುದರಿಂದ ರಾಜ್ಯದ ಅಂತರ್ಜಲ ಕುಸಿತವಾಗುತ್ತಿರುವುದು ಮತ್ತು ಇನ್ನೀತರ ಹಲವು ಕಾರಣಗಳಿಗಾಗಿ ತಮಿಳುನಾಡಿನ ವ್ಯಾಪಾರಿಗಳ ಸಂಘಟನೆ ಈ ನಿರ್ಧಾರವನ್ನು ತಳೆದಿದೆ
 
ಹಲವು ದಿನಗಳಿಂದ ತಮಿಳುನಾಡಿನಲ್ಲಿ ವಿದೇಶಿ ಪಾನೀಯಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದ್ದರಿಂದ ಭಾರೀ ಪ್ರಮಾಣದಲ್ಲಿ ಪಾನೀಯಗಳ ಮಾರಾಟ ಇಳಿಕೆಯಾಗಿದೆ ಎನ್ನಲಾಗುತ್ತಿದೆ.
ಪೆಪ್ಸಿ ಕೋಕಾಕೋಲಾ ಮಾರಾಟ ಸ್ಥಗಿತಗೊಂಡಿರುವುದರಿಂದ ಗೃಹ ಉತ್ಪನ್ನ ಪಾನೀಯಗಳು ಹಾಗೂ ಎಳನೀರು ಸೇರಿದಂತೆ ನೈಸರ್ಗಿಕ ಪಾನೀಗಳ ಮಾರಾಟ ಜೋರಾಗಿದೆ.
 
ಇತ್ತೀಚಿಗೆ ಮರೀನಾ ಸಮುದ್ರತೀರದಲ್ಲಿ ಜಲ್ಲಿಕಟ್ಟು ನಿಷೇಧ ತೆರವಿಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದಾಗ  ಬಹುರಾಷ್ಟ್ರೀಯ ಕಂಪನಿಗಳು ರಾಜ್ಯದ ನೀರು ಬಳಸಿಕೊಂಡು ತಂಪು ಪಾನೀಯಗಳನ್ನು ತಯಾರಿಸುತ್ತಿದ್ದು ಅದಕ್ಕೆ ನಿಷೇಧ ಹೇರಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದವು. ಆದರೆ ವ್ಯಾಪಾರಿ ಸಂಘಟನೆ ನಿಷೇಧ ಹೇರಲಾಗದು . ಅದು ಸರಕಾರಕ್ಕೆ ಸಂಬಧಿಸಿದ್ದು. ಹೀಗಾಗಿ ಅವುಗಳನ್ನು ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ, ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಹೇಳಿರುವುದಾಗಿ ತಮಿಳುನಾಡು ವ್ಯಾಪಾರಿಗಳ ಸಂಘದ ಅಧ್ಯಕ್ಷ ವೆಲೈಯನ್ ಹೇಳಿದ್ದರು.
 

ವೆಬ್ದುನಿಯಾವನ್ನು ಓದಿ