ಗ್ರಾಹಕರಿಗೆ ಸಂತಸ: ಪೆಟ್ರೋಲ್, ಡೀಸೆಲ್ ದರದಲ್ಲಿ 2.50 ರೂ. ಕಡಿತ ಸಾಧ್ಯತೆ

ಗುರುವಾರ, 30 ಅಕ್ಟೋಬರ್ 2014 (13:36 IST)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆಯಾಗಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 2.50 ರಷ್ಟು ಕಡಿತವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್‌ ದರ 85 ರೂಪಾಯಿಗಳಿಗೆ ಕುಸಿದಿದ್ದರಿಂದ ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಗೊಳಿಸುವ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗಿದೆ.
 
ಒಂದು ವೇಳೆ ಪೆಟ್ರೋಲ್ ದರದಲ್ಲಿ ಕಡಿತವಾದಲ್ಲಿ ಆಗಸ್ಟ್ 2014 ರಿಂದ ಸತತ ಆರನೇ ಬಾರಿಗೆ ಪೆಟ್ರೋಲ್ ದರದಲ್ಲಿ ಇಳಿಕೆಯಾದಂತಾಗುತ್ತದೆ. ಕೇಂದ್ರ ಸರಕಾರ ದರ ನಿಯಂತ್ರಣ ಮುಕ್ತಗೊಳಿಸಿದ ನಂತರ ಮೊದಲ ಬಾರಿಗೆ ಡೀಸೆಲ್ ದರದಲ್ಲಿ ಇಳಿಕೆಯಾಗಲಿದೆ. 
 
ಪ್ರಸಕ್ತ ತಿಂಗಳ ಮೊದಲ ವಾರದಲ್ಲಿ ಎರಡು ಬಾರಿ ಪೆಟ್ರೋಲ್ ದರದಲ್ಲಿ 2 ರೂಪಾಯಿ ಕಡಿತಗೊಳಿಸಿ ಕೇಂದ್ರ ಸರಕಾರ ಆದೇಶ ಹೊರಡಿಸಿತ್ತು.
 
ಪ್ರಸ್ತುತ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 66.65 ರೂಪಾಯಿಗಳಾಗಿದ್ದು, ಮುಂಬೈನಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 74.46 ರೂಪಾಯಿಗಳಾಗಿವೆ.
 
 
 

ವೆಬ್ದುನಿಯಾವನ್ನು ಓದಿ