ಪೆಟ್ರೋಲ್, ಡೀಸೆಲ್ ದರದಲ್ಲಿ 6 ರೂಪಾಯಿ ಇಳಿಕೆ ಸಾಧ್ಯತೆ

ಶನಿವಾರ, 29 ನವೆಂಬರ್ 2014 (13:19 IST)
ಅಂತಾರಾಷ್ಟ್ರೀಯ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ದರ 72 ಡಾಲರ್‌ಗಳಿಗೆ ಇಳಿಕೆಯಾಗಿದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ 5 ರೂಪಾಯಿಗಳಿಂದ 6 ರೂಪಾಯಿಗಳವರೆಗೆ ಇಳಿಕೆಯಾಗುವ ಸಾಧ್ಯತೆಗಳಿರುವೆ ಎಂದು ತೈಲ ಮತ್ತು ಅನಿಲ ಖಾತೆ ಸಚಿವಾಲಯದ ಮೂಲಗಳು ತಿಳಿಸಿವೆ.  
 
ಮಾಧ್ಯಮ ವರದಿಗಳ ಪ್ರಕಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 5 ರೂಪಾಯಿಗಳ ಇಳಿಕೆಯಾಗಲಿದ್ದು, ಡಿಸೇಲ್ ದರದಲ್ಲಿ 6 ರೂಪಾಯಿಗಳಷ್ಟು ಇಳಿಕೆಯಾಗಲಿದೆ ಎಂದು ಪ್ರಮುಖ ತೈಲ ಕಂಪೆನಿಯ ಮುಖ್ಯಸ್ಥರು ತಿಳಿಸಿದ್ದಾರೆ, 
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ  ಕಳೆದ ನವೆಂಬರ್ 2008ರಲ್ಲಿದ್ದ ಪೆಟ್ರೋಲ್ ದರ ಮತ್ತು ಡಿಸೇಲ್ ದರದಲ್ಲಿ ಇಲ್ಲಿಯವರೆಗೆ ಶೇ.15 ರಷ್ಟು ಕುಸಿತಗೊಂಡಂತಾಗಿದೆ ಎಂದು ಒಪೆಕ್ ಸಂಸ್ಥೆ ತಿಳಿಸಿದೆ.
 
ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 64.24 ರೂಪಾಯಿಗಳಾಗಿವೆ. ಮುಂಬೈಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 71.91 ರೂಪಾಯಿಗಳಿಗೆ ತಲುಪಿದೆ.
 
 

ವೆಬ್ದುನಿಯಾವನ್ನು ಓದಿ