ಹರಿದಿದ್ದ ಪೇಟದ ತುದಿಯಲ್ಲೇ ಹರಿಯಿತು ಮೋದಿ ವಾಕ್ಪಟುತ್ವ

ಮಂಗಳವಾರ, 19 ಆಗಸ್ಟ್ 2014 (12:27 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ ದಿನದಂದು ಭಾಷಣ ಮಾಡುವ ಸಂದರ್ಭದಲ್ಲಿ ಅವರು ಧರಿಸಿದ್ದ ಪೇಟದ ತುದಿ ಹರಿದಿತ್ತೇ? ಪೇಟದ ಹಸಿರು ಬಾಲದ ತುದಿ ಹರಿದಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಮೋದಿ ಈ ಸಂದರ್ಭದಲ್ಲಿ ಅರ್ಧ ತೋಳಿನ ಕ್ರೀಮ್ ಕುರ್ತಾವನ್ನು ಧರಿಸಿದ್ದರು.

ಕೆಂಪು ಕೋಟೆಯಿಂದ ಅವರ ಭಾಷಣವನ್ನು ನೇರಪ್ರಸಾರ ಮಾಡಲಾಗಿದ್ದು, ಈ ಸಮಾರಂಭ ವೀಕ್ಷಣೆಗೆ 10,000 ಜನರಿಗೆ ಅವಕಾಶ ನೀಡಲಾಗಿತ್ತು.

ಆದರೆ, ಛಾಯಾಚಿತ್ರಗ್ರಾಹಕ ಸೆರೆಹಿಡಿದ ಚಿತ್ರದಲ್ಲಿ ಮೋದಿ ಧರಿಸಿದ್ದ ಪೇಟದ ಹರಿದ ಭಾಗ ಸ್ಪಷ್ಟವಾಗಿ ಕಂಡಿದೆ. ಹರಿದ ಪೇಟದ ತುದಿಯಲ್ಲೇ ಮೋದಿ ವಾಗ್ಝರಿ ಪ್ರವಾಹದಂತೆ ಹರಿಯಿತು.  ಪೇಟವು ಮೂರು ವರ್ಣಗಳಿಂದ ಕೂಡಿದ್ದು,  ಕೇಸರಿ, ಬಿಳಿ ಮತ್ತು ಹಸಿರು ಭಾರತದ ತ್ರಿವರ್ಣಧ್ವಜದ ವರ್ಣಗಳು.  ಪೇಟದ ಹರಿದ ಭಾಗ ಬಹುಶಃ ನರೇಂದ್ರ ಮೋದಿ ಗಮನಕ್ಕೆ ಕೂಡ ಬರಲಿಲ್ಲವೆಂದು ಕಾಣುತ್ತದೆ. 
 

ವೆಬ್ದುನಿಯಾವನ್ನು ಓದಿ