ವಿಕಿರಣ ಸೋರಿಕೆ ಹಿನ್ನೆಲೆ ತುರ್ತು ಭೂ ಸ್ಪರ್ಷ ಮಾಡಿದ ವಿಮಾನ

ಶುಕ್ರವಾರ, 29 ಮೇ 2015 (15:38 IST)
ಟರ್ಕಿಶ್ ವಿಮಾನದಲ್ಲಿ ತರಲಾಗುತ್ತಿದ್ದ ರೇಡಿಯೋ ಆ್ಯಕ್ಟಿವ್ ವಿಕಿರಣ ಸೋರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ವಿಮಾನವು ನಗರದ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಭೂಸ್ಪರ್ಶ ಮಾಡಿದೆ.
 
ರೇಡಿಯೋ ಆ್ಯಕ್ಟಿವ್ ವಿಕಿರಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗಾಗಿ ಬಳಸುತ್ತಾರೆ ಎನ್ನಲಾಗಿದ್ದು, ವಿಶೇಷ ಮೆಡಿಕಲ್ ಕಿಟ್‌ನಲ್ಲಿ ಸುಮಾರು 10 ಪ್ಯಾಕೆಟ್‌ಗಳನ್ನು ತರಲಾಗುತ್ತಿತ್ತು. ಈ ಪೈಕಿ 4 ಪ್ಯಾಕ್‌ಗಳಿಂದ ವಿಕಿರಣ ಸೋರಿಕೆಯಾಗುತ್ತಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ಭೂಸ್ಪರ್ಶ ಮಾಡಿದೆ ಎಂದು ತಿಳಿದು ಬಂದಿದೆ. 
 
ಘಟನೆ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ತುರ್ತಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್​ಡಿಆರ್​ಎಫ್)ದ ತಜ್ಞರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಈ ವಿಕಿರಣ ಸೋರಿಕೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾರವಣ ಸೃಷ್ಠಿಯಾಗಿತ್ತು ಎನ್ನಲಾಗಿದ್ದು, ವಿಮಾನವು ಟರ್ಕಿಶ್ ಏರ್‌‍ಲೈನ್ಸ್‌ಗೆ ಸೇರಿದ್ದಾಗಿದೆ. 

ವೆಬ್ದುನಿಯಾವನ್ನು ಓದಿ