ದಯವಿಟ್ಟು ವದಂತಿ ಸೃಷ್ಟಿಸಬೇಡಿ: ಪ್ರತಿಪಕ್ಷಗಳಿಗೆ ಸುಷ್ಮಾ ಮನವಿ

ಶುಕ್ರವಾರ, 28 ನವೆಂಬರ್ 2014 (13:10 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಇರಾಕ್‌ನಲ್ಲಿ ಕಾಣೆಯಾಗಿರುವ ಭಾರತೀಯರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅಲ್ಲದೆ ಈ ವಿಷಯವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದ್ದು, ಶೋಧನೆಯತ್ತ ನಿರಂತರವಾಗಿ ಗಮನ ಹರಿಸುತ್ತಿದೆ. ಹಾಗಾಗಿ ದಯವಿಟ್ಟು ಯಾವುದೇ ರೀತಿಯ ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ವಿದೇಶಾಂಗ ಸಚಿವೆ ಪ್ರತಿಪಕ್ಷಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.  
 
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಈಗಾಗಲೇ 7 ರಾಷ್ಟ್ರಗಳೊಂದಿಗೆ ಚರ್ಚಿಸಿದ್ದು, 6 ರಾಷ್ಟ್ರಗಳ ಮಾಹಿತಿ ಪ್ರಕಾರ ನಮ್ಮ ದೇಶದ ಪ್ರಜೆಗಳು ಜೀವಂತವಾಗಿಯೇ ಇದ್ದಾರೆ. ಅದರೆ ಲಿಖಿತ ಮಾಹಿತಿಗಳಲ್ಲಿ ಮಾತ್ರ ಜೀವಂತವಾಗಿಲ್ಲವಾಗಿದ್ದಾರೆ. ಅದ್ದರಿಂದ ಸರ್ಕಾರ ಈಗಾಗಲೇ ಶೋಧನಾ ಕ್ರಮವನ್ನು ಕೈಗೊಂಡಿದ್ದು, ಶೀಘ್ರವೇ ಪತ್ತೆ ಹಚ್ಚಿ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಿದ್ದೇವೆ. ಹಾಗಾಗಿ ಅನಾವಶ್ಯಕವಾಗಿ ಮಾತನಾಡಿ ವದಂತಿ ಸೃಷ್ಟಿಸಬೇಡಿ ಎಂದು ಸ್ವರಾಜ್ ಪ್ರತಿಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿಕೊಂಡರು.  
 
ಪ್ರತಿಪಕ್ಷಗಳ ಸದಸ್ಯರು, ಇರಾಕ್‌ನಲ್ಲಿ ಹಲವು ಭಾರತೀಯರು ಕಾಣೆಯಾಗಿರುವ ವಿಷಯ ತಿಳಿದಿದ್ದರೂ ಕೂಡ ಸರ್ಕಾರ ಯಾವುದೇ ರೀತಿಯ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸದನದಲ್ಲಿ ಗದ್ದಲ ಎಬ್ಬಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವೆ ಸುಷ್ಮಾ ಸ್ವರಾಜ್ ಹೀಗೆ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ