ಪ್ರಧಾನಿ ಮೋದಿ ಪ್ರಾಮಾಣಿಕ ವ್ಯಕ್ತಿ: ಅಮರ್ ಸಿಂಗ್

ಶನಿವಾರ, 30 ಏಪ್ರಿಲ್ 2016 (12:55 IST)
ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಶುಕ್ರವಾರ ಪ್ರಧಾನಿ ಮೋದಿ ಅವರನ್ನು 'ಪ್ರಾಮಾಣಿಕ ವ್ಯಕ್ತಿ' ಎಂದು ಹೊಗಳಿದ್ದಾರೆ.

ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅಮರ್ ಸಿಂಗ್, ಮೋದಿ ಅವರು ಪ್ರಾಮಾಣಿಕ ವ್ಯಕ್ತಿ ನಿಜ. ಆದರೆ ದೇಶದ ಜನರು ಅವರ ಮೇಲೆ ಬೇಸರಗೊಂಡಿದ್ದಾರೆ. ಅವರ ಮೇಲೆ ಇಟ್ಟಿದ್ದ ಭರವಸೆಗಳು ಫಲಪ್ರದವಾಗದಿರುವುದೇ ಅದಕ್ಕೆ ಕಾರಣ. ಅವರ ಸಹೋದರ ಒಬ್ಬ ಸಾಮಾನ್ಯ ಕ್ಲರ್ಕ್, ಅಮ್ಮ ಒಂದು ಪುಟ್ಟ ಮನೆಯಲ್ಲಿ ವಾಸಿಸುತ್ತಾರೆ. ವಿರೋಧ ಪಕ್ಷಗಳು ಅವರ ವಿರುದ್ಧ ಕಂಡಿದ್ದು ಕೇವಲ 10 ಲಕ್ಷ ಮೌಲ್ಯದ ಶೂಟ್ ಮಾತ್ರ ಎಂದು ಹೇಳಿದ್ದಾರೆ. 
 
ತಾವು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರನ್ನು ಭೇಟಿಯಾಗಲು ಬಯಸುವುದಾಗಿ ಹೇಳಿದ ಅವರು ದೇಶ ಕಾಂಗ್ರೆಸ್ ಮುಕ್ತ ಮತ್ತು ಆರ್‌ಎಸ್ಎಸ್ ಮುಕ್ತವಾಗಲಿ ಆಗಲು ಸಾಧ್ಯವಿಲ್ಲ. ಎರಡು ಉಳಿದುಕೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದಾರೆ. 
 
ಬಿಜೆಪಿ ನಾಯಕರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳಿಂದಾಗಿ ಮೋದಿ ಅವರು ಕೈಗೊಂಡ ಉತ್ತಮ ಉಪಕ್ರಮಗಳು ಸಹ ವ್ಯರ್ಥವಾಗಿ ಹೋಗುತ್ತಿವೆ ಎಂದು ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ. 
 
ಬಾಲಿವುಡ್ ಸ್ಟಾರ್ ಅಮಿತಾಬ್ ಅವರೊಂಜಿಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು ಅವರ ಜತೆಯಲ್ಲಿ ನನಗೆ ಅಭಿಪ್ರಾಯ ಭೇದವಿದ್ದುದು ನಿಜ, ಆದರೆ ಅಮಿತಾಬ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ನನ್ನ ಬಳಿ ಕ್ಷಮೆಯಾಚಿಸಿದ್ದಾರೆ ಎಂದು  ಹೇಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ