8 ದಿನದ ಶಿಶುವಿನ ಪ್ರಾಣ ಕಾಪಾಡಿದ ಪ್ರಧಾನಿ ಮೋದಿ

ಸೋಮವಾರ, 6 ಮಾರ್ಚ್ 2017 (13:59 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ 8 ದಿನದ ಶಿಶುವಿನ ಪಾಲಿಗೆ ನಿಜಕ್ಕೂ ದೇವರಾದರು. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ಪ್ರಾಣ ರಕ್ಷಣೆ ಮಾಡಲು ಪ್ರಧಾನಿ ಮೋದಿ ಧಾವಿಸಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.


ಅಸ್ಸಾಂ ಮೂಲದ ಮಗು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು, ಜೀವಾಪಾಯದಲ್ಲಿತ್ತು. ಅದಕ್ಕೆ ತುರ್ತು ಚಿಕಿತ್ಸೆಯ  ಅಗತ್ಯವಿತ್ತು. ಆದರೆ ದಿಬುರ್ ಘಡ್ ಎಂಬ ಪ್ರದೇಶದಿಂದ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ಶಿಫ್ಟ್ ಆಗಬೇಕಿತ್ತು. ಆದರೆ ಇದು ಅಷ್ಟು ಸುಲಭವಾಗಿರಲಿಲ್ಲ.

ದೆಹಲಿಗೆ ವಿಶೇಷ ವಿಮಾನ ಮೂಲಕ ಮಗುವನ್ನು ಕರೆತರಲಾಯಿತು.ಅಷ್ಟರಲ್ಲಿ ಸಂಜೆಯಾಗಿತ್ತು. ದೆಹಲಿಯ ಟ್ರಾಫಿಕ್ ಆ ಹೊತ್ತಿಗೆ ಕೇಳುವಂತೇ ಇಲ್ಲ. ಈ ಸಂದರ್ಭದಲ್ಲಿ ಅಲ್ಲಿಂದ ಆಸ್ಪತ್ರೆಗೆ ತೆರಳಬೇಕಾದರೆ ಸುಲಭವಲ್ಲ. ಆದರೆ ವಿಷಯ ತಿಳಿದ ಪ್ರಧಾನಿ ಮೋದಿ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿ ತಕ್ಷಣ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ವಾಹನ ಸಂಚಾರ ನಿಯಂತ್ರಿಸುವಂತೆ ಆದೇಶಿಸಿದರು.

ಅದರಂತೆ ದೆಹಲಿ ಪೊಲೀಸರೂ ತಕ್ಷಣ ಕಾರ್ಯಪ್ರವೃತ್ತರಾಗಿ ಶಿಶುವಿನ ಜೀವ ಉಳಿಸಿದರು. ಸದ್ಯ ಶಿಶು ಆರೋಗ್ಯವಾಗಿದೆ. ಪ್ರಧಾನಿ ಮೋದಿ ದೇವರಂತೆ ಬಂದು ನಮ್ಮನ್ನು ಕಾಪಾಡಿದರು ಎಂದು ಪೋಷಕರು ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ