ಮತ್ತೆ ವಿದೇಶ ಪ್ರವಾಸಕ್ಕೆ ಹೊರಟ ಪ್ರಧಾನಿ

ಸೋಮವಾರ, 6 ಜುಲೈ 2015 (09:14 IST)
ಪ್ರಧಾನಿ ನರೇಂದ್ರ ಮೋದಿ ಮತ್ತೆ ವಿದೇಶ ಪ್ರವಾಸಕ್ಕೆ ಹೊರಟಿದ್ದಾರೆ. ಸತತ 8 ದಿನಗಳ ದೀರ್ಘ ಪ್ರವಾಸದಲ್ಲಿ ಮೋದಿ 5 ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಇಂದಿನಿಂದ ಪ್ರಾರಂಭವಾಗುವ ಅವರ ಪ್ರವಾಸ 13 ನೇ ತಾರೀಖು ಕೊನೆಗೊಳ್ಳಲಿದೆ. ಪ್ರತಿ ದೇಶಕ್ಕೂ ಒಂದೊಂದು ದಿನ ಭೇಟಿ ನೀಡಲಿರುವ ಅವರು ಇಂದು ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ.
 

ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ, ತುರ್ಕ್​ವೆುನಿಸ್ತಾನ, ಉಜ್ಬೇಕಿಸ್ತಾನ, ಕಿರ್ಗಿಸ್ತಾನ ಮತ್ತು ತಜಿಕಿಸ್ತಾನ್​ಗೆ ಮೋದಿಯವರು  ಭೇಟಿ ನೀಡಲಿದ್ದಾರೆ. ತದನಂತರ ರಷ್ಯಾದಲ್ಲಿ ನಡೆಯಲಿರುವ 7ನೇ ಬ್ರಿಕ್ಸ್ ರಾಷ್ಟ್ರಗಳ ಸಮ್ಮೇಳನ ಮತ್ತು ಶಾಂಘೈ ಕೋಆಪರೇಷನ್ ಆರ್ಗನೈಸೇಶನ್ ಸಮ್ಮೇಳನದಲ್ಲಿಯೂ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ. ಬ್ರಿಕ್ಸ್‌ ಸಭೆಯಲ್ಲಿ ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳಲಿವೆ. 
 
5 ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ದ್ವಿಪಕ್ಷೀಯ ಸಂಬಂಧ, ಇಂಧನ, ರಕ್ಷಣಾ ಮತ್ತು ಆರ್ಥಿಕ ಒಪ್ಪಂದಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ.
 
ಅಲ್ಲದೇ ರಷ್ಯಾದಲ್ಲಿ ಪ್ರಧಾನಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿಯಾಗಿ ಮಾತನಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ