ಮೋದಿ ಸರಕಾರ ಹಗರಣಗಳಿಂದ ಮುಕ್ತ, ಆದರೆ, ರೈತರ ವಿಶ್ವಾಸ ಗೆಲ್ಲಬೇಕಿದೆ: ದೇವೇಗೌಡ

ಗುರುವಾರ, 21 ಮೇ 2015 (17:17 IST)
ಮೋದಿ ಸರಕಾರ ಒಂದು ವರ್ಷದ ಅಧಿಕಾರವಧಿಯನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ, ಹಗರಣ ಮುಕ್ತವಾಗಿ ಸರಕಾರ ಒಂದು ವರ್ಷ ಪೂರೈಸಿದೆ ಎಂಬ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ. ಆದರೆ ಕೇಂದ್ರ ರೈತರ ವಿಶ್ವಾಸಗಳಿಸಲು ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

"ಭೂಮಿಯನ್ನು ಕಬಳಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದರ ಮೂಲಕ ರೈತ ಪರ ಉತ್ತಮ ಕಾರ್ಯಗಳನ್ನು ಅನುಸರಿಸುವ ಅಗತ್ಯವಿದೆ", ಎಂದು ಸ್ವತಃ ಮಣ್ಣಿನ ಮಗ ಎಂದು ಕರೆಸಿಕೊಳ್ಳುವ ಗೌಡರು ಹೇಳಿದ್ದಾರೆ. 
 
"ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಪ್ರಕರಣದಂತೆ ಅಕ್ರಮವಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಂಡ ಯೋಜನೆಯ ಪ್ರವರ್ತಕರ ವಿರುದ್ಧ ಕೇಂದ್ರ ವರ್ತಿಸಬೇಕು. ಇಂತಹ ಕ್ರಮ ರೈತರನ್ನು ಅವರ ಪರವಾಗಿ ನಿಲ್ಲುವಂತೆ ಮಾಡುತ್ತದೆ ಮತ್ತು ಈ ಮೂಲಕ ಮೋದಿಯವರು ಸ್ಮಾರ್ಟ್ ನಗರಗಳು ಸೇರಿದಂತೆ ತನ್ನ ಕನಸಿನ ಯೋಜನೆಗಳನ್ನು ಪೂರ್ಣಗೊಳಿಸಲು ಭೂಮಿ ಪಡೆಯಲು ಸಹಾಯಕವಾಗುತ್ತದೆ, " ಎಂದು ಗೌಡರು ಸಲಹೆ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ