ಸಂಸದರ ಗೈರು ಹಾಜರಿ ನಿಭಾಯಿಸಲು ವಾಟ್ಸ್ ಅಫ್ ಗ್ರುಪ್ ರಚಿಸಲು ಮೋದಿ ಆದೇಶ

ಗುರುವಾರ, 31 ಜುಲೈ 2014 (18:13 IST)
ಸಂಸತ್ತಿನಲ್ಲಿ ತಮ್ಮ ಪಕ್ಷದ ಸದಸ್ಯರ ಗೈರು ಹಾಜರಿಯನ್ನು ತಡೆಯಲು, ಭಾರತೀಯ ಜನತಾ ಪಕ್ಷ (ಬಿಜೆಪಿ) ತ್ವರಿತ ಮೆಸೆಂಜರ್ ವಾಟ್ಸ್ ಅಫ್‌ನಲ್ಲಿ ಒಂದು ಗ್ರುಪ್ ರಚಿಸಿಕೊಂಡು ಆ ಮೂಲಕ ಸಭೆ ಮತ್ತು ಕಲಾಪಗಳ ಕುರಿತು ಮಾಹಿತಿ ನೀಡಬೇಕೆಂದು ನಿರ್ಧರಿಸಿದೆ. 

ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಈ ಗುಂಪನ್ನು ರಚಿಸಿ, ಸಂಸದರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. 
 
ಸಂಸತ್ತಿನ ಎರಡು ಸದನಗಳಲ್ಲಿ ಸದಸ್ಯರ ಹಾಜರಾತಿಯ ಪ್ರಮಾಣದ ಬಗ್ಗೆ  ಪ್ರಧಾನಿ ನರೇಂದ್ರ ಮೋದಿಯವರು ಅಸಮಾಧಾನಗೊಂಡಿದ್ದು, ಹೆಚ್ಚು ಪ್ರಾಮಾಣಿಕರಾಗಿರುವಂತೆ ಮತ್ತು ಗುರುವಾರ ನಡೆಯಲಿರುವ ಸಂಸದೀಯ ಪಕ್ಷದ ಸಭೆಯಲ್ಲಿ ಹಾಜರಿರುವಂತೆ  ಸಂಸದರಿಗೆ ಸಂದೇಶ ಕಳುಹಿಸಿದ್ದಾರೆ. 
 
ಹಾಜರಾತಿಯನ್ನು ಪಾರದರ್ಶಕವಾಗಿರಿಸಲು ವಾಟ್ಸ್ ಅಫ್‌ನಲ್ಲಿ ಒಂದು ಗ್ರುಪ್ ರಚಿಸುವಂತೆ ಮತ್ತು  ಸಭೆ ಮತ್ತು ಕಲಾಪಗಳ ಬಗ್ಗೆ ಅವರಿಗೆ ನಿಯಮಿತ ಸಂದೇಶ ಕಳುಹಿಸುವಂತೆ  ಸಂಸದೀಯ ವ್ಯವಹಾರಗಳ ಸಚಿವರಿಗೆ  ಮೋದಿ ಸೂಚನೆ ನೀಡಿದ್ದಾರೆ. 
 
ಅಲ್ಲದೇ ಪಕ್ಷದ ಪ್ರತಿಯೊಬ್ಬ ಸಂಸದರು ಫೇಸ್‌ಬುಕ್ ಖಾತೆ ಹೊಂದಿರುವಂತೆ ಮೋದಿಯವರು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ