ಸಂಸತ್ತಿನ ಕ್ಯಾಂಟಿನ್‌ನಲ್ಲಿ 29 ರೂ. ಪಾವತಿಸಿ ಶಾಖಾಹಾರಿ ಲಂಚ್ ಸವಿದ ಮೋದಿ

ಸೋಮವಾರ, 2 ಮಾರ್ಚ್ 2015 (17:02 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಸತ್ತಿನಲ್ಲಿರುವ ಕ್ಯಾಂಟಿನ್‌ಗೆ ಆಗಮಿಸಿ 29 ರೂಪಾಯಿ ಪಾವತಿಸಿ ಶಾಖಾಹಾರಿ ಊಟ ಸವಿದು ಸಂಸದರಿಗೆ ಅಚ್ಚರಿ ಮೂಡಿಸಿದ್ದಾರೆ.
 
ವರದಿಗಳ ಪ್ರಕಾರ, ಸಂಸತ್ತಿನ ಮೊದಲ ಮಹಡಿಯಲ್ಲಿರುವ ಕ್ಯಾಂಟಿನ್‌ನತ್ತ ಹಿಂಬಾಲಕರಿಲ್ಲದೆ ಸರಳವಾಗಿ ಆಗಮಿಸಿದ ಮೋದಿ ಅಲ್ಲಿದ್ದವರಿಗೆ ಅಚ್ಚರಿ, ಸಂತಸ ಮೂಡಿಸಿದರು   
 
ಪ್ರಧಾನಿ ಮೋದಿಯವರ ಅಕಸ್ಮಿಕ ಆಗಮನದಿಂದ ಆಘಾತಗೊಂಡ ಕ್ಯಾಂಟಿನ್‌ನ ಸಿಬ್ಬಂದಿ, ಕೂಡಲೇ ಧಾವಿಸಿ ಮೋದಿಯವರಿಗೆ ಟೇಬಲ್ ತೋರಿಸಿ ಸರ್ ಊಟ ಮಾಡ್ತಿರಾ ಎಂದು ಕೇಳಿದ್ದಾರೆ.
 
ಮಧ್ಯಾಹ್ನದ ಊಟಕ್ಕಾಗಿ ತಯಾರಿಸಿದ ಯಾವುದೇ ಶಾಖಹಾರಿ ಊಟವನ್ನು ನೀಡುವಂತೆ ಹೇಳಿದ್ದಾರೆ. ಅದಕ್ಕಿಂತ ಮುಂಚೆ ಸ್ವಲ್ಪ ನೀರು ಮತ್ತು ಸಲಾಡ್ ನೀಡುವಂತೆ ಕೋರಿದ್ದಾರೆ.
 
ಕ್ಯಾಂಟಿನ್‌ ಸಿಬ್ಬಂದಿ ನಂತರ ಆಲೂ ಸಬ್ಜಿ, ರಜ್ಮಾ, ರೈಸ್, ರೋಟಿ ಮತ್ತು ಮೊಸರನ್ನು ಹೊಂದಿದ್ದ ಶಾಖಾಹಾರಿ ಊಟವನ್ನು ನೀಡಿದ್ದಾರೆ.ಊಟವಾದ ನಂತರ 29 ರೂಪಾಯಿಗಳನ್ನು ಪಾವತಿಸಿ ಅಲ್ಲಿಂದ ತೆರಳಿದ್ದಾರೆ.
 
ಮೋದಿ ಕುಳಿತಿದ್ದ ಟೇಬಲ್‌ನಲ್ಲಿ ಬಿಹಾರ್ ಬಿಜೆಪಿ ಸಂಸದ ಛೇಡಿ ಪಾಸ್ವಾನ್ ಸೇರಿದಂತೆ ಮೂವರು ಸಂಸದರು ಉಪಸ್ಥಿತರಿದ್ದರು.
 
ಮಧ್ಯಾಹ್ನದ ಊಟಕ್ಕಾಗಿ ಸುಮಾರು 25-30 ಸಂಸದರು ಕ್ಯಾಂಟಿನ್‌ಗೆ ಆಗಮಿಸಿದ್ದರು. ಮೋದಿ ಅವರೊಂದಿಗೆ ಲಘುವಾಗಿ ಹರಟೆ ಹೊಡೆಯುತ್ತಾ ತಮ್ಮ ಮಧ್ಯಾಹ್ನದ ಲಂಚ್ ಸೇವಿಸಿದರು.

ವೆಬ್ದುನಿಯಾವನ್ನು ಓದಿ