ವಿಜಯ ಘಾಟ್ ತೆರಳಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಗೌರವ ಸಲ್ಲಿಸಿದ ಮೋದಿ

ಗುರುವಾರ, 2 ಅಕ್ಟೋಬರ್ 2014 (11:52 IST)
ಇಂದು ದೇಶ ಮಹಾತ್ಮ ಗಾಂಧಿಯವರ ಜತೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಕೂಡ  ಆಚರಿಸುತ್ತಿದ್ದು,  ವಿಜಯ್‌ಘಾಟ್‌ನಲ್ಲಿರುವ  ಶಾಸ್ತ್ರಿ ಸಮಾಧಿಗೆ ತೆರಳಿದ  ಪ್ರಧಾನಿ ಮೋದಿ ದೇಶಭಕ್ತನಿಗೆ ನಮನ ಸಲ್ಲಿಸಿದರು. 

ಮೊದಲು ರಾಜ್‌ಘಾಟ್‌ಗೆ ಭೇಟಿ ನೀಡಿ  ಮಹಾತ್ಮ ಗಾಂಧಿಯವರ  (145 ನೇ ಜನ್ಮ ವಾರ್ಷಿಕೋತ್ಸವ)  ಸಮಾಧಿಗೆ ಮೋದಿ ಪುಷ್ಪ ಸಮರ್ಪಣೆ ಮಾಡಿದರು. 
 
ಮೋದಿ ಶಾಸ್ತ್ರಿಯವರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ  ಮಾಜಿ ಪ್ರಧಾನಿಯವರ ಮಗ, ಹಿರಿಯ ಕಾಂಗ್ರೆಸ್ ನಾಯಕ ಅನಿಲ್ ಶಾಸ್ತ್ರಿ ಕೂಡ  ಉಪಸ್ಥಿತರಿದ್ದರು. 
 
ಭಾರತದ ಎರಡನೇ ಪ್ರಧಾನಿಯಾಗಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಭಾರತೀಯ  ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿದ್ದು, ಗಾಂಧಿ ಮತ್ತು  ಜವಾಹರಲಾಲ್ ನೆಹರೂ ಅವರ ನಿಷ್ಠಾವಂತ ಅನುಯಾಯಿಗಳಾಗಿದ್ದರು. 
 
ಮರಣೋತ್ತರ ಭಾರತ ರತ್ನ ಪ್ರಶಸ್ತಿ ಪಡೆದವರಲ್ಲಿ ಶಾಸ್ತ್ರಿ ಮೊದಲಿಗರಾಗಿದ್ದು, ಅವರ ನೆನಪಿಗಾಗಿ ನವದೆಹಲಿಯಲ್ಲಿ ವಿಜಯ್‌ಘಾಟ್‌ನ್ನು ನಿರ್ಮಿಸಲಾಗಿದೆ. 

ವೆಬ್ದುನಿಯಾವನ್ನು ಓದಿ