ಹುತಾತ್ಮರ ದಿನ: ಮಹಾತ್ಮಾ ಗಾಂಧಿಗೆ ಮೋದಿ ನಮನ

ಶುಕ್ರವಾರ, 30 ಜನವರಿ 2015 (10:16 IST)
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿಯಾದ ಇಂದು ಅವರಿಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ. 

ಪೂಜ್ಯ ಬಾಪೂಜಿಯವರಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ರಾಷ್ಟ್ರಪಿತ 1948 ರಲ್ಲಿ ಈ ದಿನ ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾಗಿದ್ದರು. ಹುತಾತ್ಮರ ದಿನವಾದ ಇಂದು ದೇಶಕ್ಕಾಗಿ ಪ್ರಾಣ ತ್ಯಜಿಸಿದ ಸರ್ವರಿಗೂ ಮೋದಿ ನಮನಗಳನ್ನು ಸಲ್ಲಿಸಿದ್ದಾರೆ. 
 
ಹುತಾತ್ಮರ ದಿನವಾದ ಇಂದು ರಾಷ್ಟ್ರ ರಕ್ಷಣೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ  ಪ್ರತಿಯೊಬ್ಬ ಹುತಾತ್ಮನಿಗೂ ನಾನು ಗೌರವವನ್ನು ಸಮರ್ಪಿಸುತ್ತೇನೆ. ಅವರ ಶೌರ್ಯ, ಧೈರ್ಯ ನಮಗೆ ಯಾವಾಗಲೂ ಸ್ಪೂರ್ತಿದಾಯವಾಗಿರಲಿದೆ ಎಂದು ಮೋದಿ ಟ್ವಿಟ್ ಹೇಳುತ್ತದೆ. 

ವೆಬ್ದುನಿಯಾವನ್ನು ಓದಿ