ಗಿನ್ನಿಸ್ ದಾಖಲೆ ಸೇರಿದ ಪ್ರಧಾನಿ ಮೋದಿ ದುಬಾರಿ ಸೂಟ್ ಹರಾಜು

ಶನಿವಾರ, 20 ಆಗಸ್ಟ್ 2016 (16:38 IST)
ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಧರಿಸಿದ್ದ ಮೋನೋಗ್ರಾಮ್ ಹೊಂದಿದ್ದ ಸೂಟ್, ದುಬಾರಿ ಸೂಟ್ ಮಾರಾಟದಲ್ಲಿ ಗಿನ್ನಿಸ್ ದಾಖಲೆ ಪುಸ್ತಕ ಸೇರಿದೆ. 
 
ಪ್ರಧಾನಿ ಮೋದಿ ಧರಿಸಿದ್ದ ಸೂಟ್ ಹರಾಜಿನಲ್ಲಿ 43,131,311 ರೂ.ಗಳಿಗೆ ಹರಾಜಾಗಿತ್ತು. ಗುಜರಾತ್‌ನ ಸೂರತ್ ನಿವಾಸಿಯಾಗಿರುವ ಲಾಲ್‌ಜಿ ಭಾಯಿ ತುಳಸಿಬಾಯಿ ಪಟೇಲ್ ಸೂಟ್ ಖರೀದಿಸಿದ್ದರು.
 
ಹರಾಜಿನಲ್ಲಿ ಬಂದ ಸೂಟ್ ಹಣವನ್ನು ಗಂಗಾ ನದಿ ಸ್ವಚ್ಚಗೊಳಿಸುವ ಯೋಜನೆಯಾದ ನಮಾಮಿ ಗಂಗೆ ಫಂಡ್‌ಗೆ ನೀಡಲಾಗಿದೆ.
 
ಮೋದಿಯವರ ಹೆಸರನ್ನು ಹೊಂದಿದ್ದ 10 ಲಕ್ಷ ರೂ ಬೆಲೆ ಬಾಳುವ ಸೂಟ್‌ ಕುರಿತಂತೆ ವಿಪಕ್ಷಗಳು ಭಾರಿ ಕೋಲಾಹಲ ಸೃಷ್ಟಿಸಿದ್ದವು. ಮಾಧ್ಯಮಗಳು ಕೂಡಾ ಸೂಟ್ ವಿಷಯದ ಬಗ್ಗೆ ಹೆಚ್ಚು ಪ್ರಚಾರ ನೀಡಿದ್ದರಿಂದ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು.
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸೂಟ್‌ನ್ನು ಮೇಕ್ ಇನ್ ಯುಕೆ ಎಂದು ಜರಿದರೆ, ಮತ್ತೊಬ್ಬ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಮೋದಿ ನಾಟಕದ ವ್ಯಕ್ತಿ ಎಂದು ತೆಗಳಿದ್ದರು.
 
ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಧರಿಸಿದ್ದ ಮೋನೋಗ್ರಾಮ್ ಹೊಂದಿದ್ದ ಸೂಟ್ ಬೇಲೆ 10 ಲಕ್ಷ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
 
ಪ್ರಧಾನಿ ಮೋದಿಯವರಿಗೆ ಕಟ್ಟಾ ಅಭಿಮಾನಿಯೊಬ್ಬ ದುಬಾರಿ ಬೆಲೆಯ ಸೂಟ್ ಉಡುಗೊರೆಯಾಗಿ ನೀಡಿದ್ದನು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ