ಮೋದಿ ತಾಯಿಯ ಸಂದೇಶ: ನನ್ನ ಆರೋಗ್ಯದ ಚಿಂತೆ ಬೇಡ, ದೇಶಕ್ಕಾಗಿ ಏಕಾಗ್ರತೆಯಿಂದ ದುಡಿ

ಭಾನುವಾರ, 28 ಫೆಬ್ರವರಿ 2016 (16:01 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಾಯಿ ಅನಾರೋಗ್ಯದಿಂದಾಗಿ ಗಾಂಧಿನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
 
100 ವರ್ಷ ವಯಸ್ಸಾಗಿರುವ ಮೋದಿಯವರ ತಾಯಿ ಹೀರಾಬೆನ್, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ತಾಯಿ ಹೀರಾಬೆನ್ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಮಾಧ್ಯಮವೊಂದರ ಸಂಪಾದಕರೊಬ್ಬರು ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ತಾಯಿಯ ಆರೋಗ್ಯ ವಿಚಾರಿಸಿದಾಗ, ತಾಯಿಯ ಮನದ ಮಾತು ಹೊರಬಂದಿದೆ. 
 
ನನ್ನ ಬಗ್ಗೆ ಯಾವುದೇ ಚಿಂತೆ ಮಾಡಬೇಡ. ನಿನ್ನ ಕೆಲಸದತ್ತ ಗಮನಕೊಡು ಮತ್ತು ದೇಶಕ್ಕಾಗಿ ದುಡಿ ಎಂದು ತಾಯಿ ಸಲಹೆ ನೀಡಿದ್ದಾಗಿ ಪ್ರಧಾನಿ ಮೋದಿ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ