ಕೊಯಿಮತ್ತೂರಿನಲ್ಲಿ ಪ್ರಧಾನಿ ಮೋದಿ ಚುನಾವಣಾ ಪೂರ್ವ ಪ್ರಚಾರ

ಮಂಗಳವಾರ, 2 ಫೆಬ್ರವರಿ 2016 (14:55 IST)
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಕೊಯಿಮತ್ತೂರಿನಲ್ಲಿ  ಸಾರ್ವಜನಿಕ ಸಭೆಯನ್ನು ನಡೆಸಲಿದ್ದಾರೆ. ಇತ್ತೀಚಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆಯಾಗಿರುವ 20 ನಗರಗಳಲ್ಲಿ ಕೊಯಿಮತ್ತೂರು ಹೆಸರು ಕೂಡ ಇದೆ. 

ಪಶ್ಚಿಮ ತಮಿಳುನಾಡಿನಲ್ಲಿರುವ ಜವಳಿ ನಗರದಕ್ಕೆ 5 ಗಂಟೆಗಳ ಭೇಟಿ ನೀಡಲಿರುವ ಪ್ರಧಾನಿಗಳು ಇಎಸ್ಐ ವೈದ್ಯಕೀಯ ಕಾಲೇಜನ್ನು ಸಹ ಉದ್ಘಾಟಿಸಲಿದ್ದಾರೆ. 
 
ಚುನಾವಣಾ ದಿನಾಂಕ ಸದ್ಯದಲ್ಲೇ ಘೋಷಣೆಯಾಗುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಎಐಡಿಎಮ್‌ಕೆ ಮತ್ತು ಡಿಎಮ್‌ಕೆಗಳು ಚುನಾವಣೆಯನ್ನೆದುರಿಸಲು ಪ್ರಾಥಮಿಕ ಸಿದ್ಧತೆಗಳಲ್ಲಿ ತೊಡಗಿವೆ. ಆದರೆ ಪ್ರಧಾನಿ ಮೋದಿಯವರ ಸಾರ್ವಜನಿಕ ಸಭೆ ತಮ್ಮ ಪ್ರಚಾರಕ್ಕೆ ಚಾಲನೆ ನೀಡಲಿದೆ ಎಂದು ಬಿಜೆಪಿ ತಿಳಿಸಿದೆ. 
 
2014ರಲ್ಲಿ ಲೋಕಸಭಾ ಚುನಾವಣೆಯನ್ನೆದುರಿಸುವಾಗ 7 ಪಕ್ಷಗಳ ಜತೆ ಮೈತ್ರಿಯನ್ನು ಮಾಡಿಕೊಂಡಿದ್ದ ಬಿಜೆಪಿ ತಮಿಳುನಾಡಿನಲ್ಲಿ ಸಹ  ಬಲವಾದ ಮೈತ್ರಿಯನ್ನು ರಚಿಸಿಕೊಳ್ಳುವ ಸನ್ನಾಹದಲ್ಲಿದೆ. 

ವೆಬ್ದುನಿಯಾವನ್ನು ಓದಿ