ಮುಂದಿನ ತಿಂಗಳು ಬಿಹಾರದಲ್ಲಿ ಮತ್ತೆ ಮೂರು ಪ್ರಚಾರ ಸಮಾವೇಶಗಳನ್ನು ನಡೆಸಲಿರುವ ಮೋದಿ

ಗುರುವಾರ, 30 ಜುಲೈ 2015 (17:18 IST)
ಇತ್ತೀಚಿಗೆ ಬಿಹಾರದ ಮುಝಪ್ಫರ್‌ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ, ಅಲ್ಲಿ ಅಪಾರ ಜನಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ಮತ್ತೆ ಮೂರು ಪ್ರಚಾರ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ. ಆಗಸ್ಟ್ 9 ರಂದು ಗಯಾದಲ್ಲಿ ಅವರು ಮತಯಾಚಿಸಲಿದ್ದಾರೆ.

ಬಿಹಾರದಲ್ಲಿ ಸದ್ಯದಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದೆ. 
 
ಆಗಸ್ಟ್ 9 ರಂದು ಗಯಾದಲ್ಲಿ ಪ್ರಚಾರ ಕಾರ್ಯ ನಡೆಸಲಿರುವ ಮೋದಿಯವರು, ಅದೇ ತಿಂಗಳ 19 ರಂದು ಸಹರ್ಸಾದಲ್ಲಿ ಮತ್ತು 30 ರಂದು ಭಾಗಲ್ಪುರದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂದು ಬಿಹಾರ್ ಬಿಜೆಪಿ ಅಧ್ಯಕ್ಷ ಮಂಗಲ್ ಪಾಂಡೆ ತಿಳಿಸಿದ್ದಾರೆ. 
 
ಗಯಾದಲ್ಲಿ ಮೋದಿಯವರ ಚುನಾವಣಾ ಪ್ರಚಾರಕ್ಕೆ ಪೂರ್ವ ತಯಾರಿಯಾಗಿ, ತಾವು ರಾಜ್ಯ ಬಿಜೆಪಿ ಸಂಸದರು, ಶಾಸಕರು ಮತ್ತು ಎಮ್ಎಲ್‌ಸಿಗಳು ಮತ್ತು ಮಗಧ್ ಮತ್ತು ಶಹಾಬಾದ್ ವಿಭಾಗದ ಮಾಜಿ ಸಂಸದರ ಜತೆ ಸಭೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ. 
 
ಬಿಹಾರ್ ವಿಧಾನಸಭೆಯಲ್ಲಿ ಎನ್‌ಡಿಎಯನ್ನು ಬಹುಮತದಿಂದ ಗೆಲ್ಲಿಸುವಂತೆ ಕೋರಿ ಪ್ರಧಾನಿ ಮೋದಿಯವರು ಕಳೆದ ವಾರ ಮುಜಪ್ಫರ್‌ಪುರದಲ್ಲಿ  ಸಾರ್ವಜನಿಕ ಸಭೆಯನ್ನು ನಡೆಸಿದ್ದರು. 

ವೆಬ್ದುನಿಯಾವನ್ನು ಓದಿ