ಬ್ರಿಕ್ಸ್ ಶೃಂಗಸಭೆಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಶನಿವಾರ, 4 ಜುಲೈ 2015 (16:20 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂದಿನ ವಾರ ರಷ್ಯಾದ ಉಫಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಸೆಂಟಲ್ ಏಷ್ಯಾ ರಾಷ್ಟ್ರಗಳಾದ ಕಜಕಿಸ್ತಾನ್, ಕೈರ್ಗಿಸ್ಥಾನ್ ಮತ್ತು ತಾಜಕಿಸ್ತಾನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
  
ಸೆಂಟ್ರಲ್ ಏಷ್ಯಾದ ಎರಡು ರಾಷ್ಟ್ರಗಳಿಗೆ ಭೇಟಿ ನೀಡಿದ ನಂತರ ಉಫಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಿಂದ ಹಿಂದಿರುಗುವಾಗ ಮೂರು ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ನವ್‌ತೇಜ್ ಸಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 
ಪ3ಧಾನಿ ಮೋದಿ ಜುಲೈ 7 ರಂದು ಉಜ್ಬೇಕಿಸ್ತಾನ್‌ಗೆ ಭೇಟಿ ನೀಡಲಿದ್ದು, ನಂತರ ಕಜಕಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ. ನಂತರ ಬ್ರಿಕ್ಸ್ ಸಭೆಗೆ ತೆರಳಲಿದ್ದಾರೆ. ಸಮಾವೇಶದಿಂದ ಹಿಂದಿರುಗುವಾಗ ತುರ್ಕಮೆನಿಸ್ತಾನ್, ಕೈರ್ಗಿಸ್ತಾನ್ ನಂತರ ತಾಜಿಕಿಸ್ತಾನ್‌ಗೆ ಭೇಟಿ ನೀಡಲಿದ್ದಾರೆ.    
 
ರಷ್ಯಾದ ಉಫಾ ನಗರದಲ್ಲಿ ನಡೆಯಲಿರುವ ಶಾಂಘೈ ಕೋ-ಆಪರೇಶನ್ ಆರ್ಗನೈಜೇಶನ್ ಶೃಂಗಸಭೆಯಲ್ಲಿ ಕೂಡಾ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನವ್‌ತೇಜ್ ತಿಳಿಸಿದ್ದಾರೆ.  
 

ವೆಬ್ದುನಿಯಾವನ್ನು ಓದಿ