ಮಾರ್ಚ್ 30ರಿಂದ ಪ್ರಧಾನಿ ಮೋದಿ ತ್ರಿರಾಷ್ಟ್ರ ಪ್ರವಾಸ

ಸೋಮವಾರ, 29 ಫೆಬ್ರವರಿ 2016 (16:48 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮುಂದಿನ ತಿಂಗಳು ಮೂರು ದೇಶಗಳ ಪ್ರವಾಸದ ಭಾಗವಾಗಿ ಬೆಲ್ಜಿಯಂ, ಸೌದಿ ಅರೇಬಿಯಾ, ಅಮೇರಿಕಾ ಭೇಟಿ ನೀಡಲಿದ್ದಾರೆ. 

ಪರಮಾಣು ಭದ್ರತಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್‌ಗೆ ಸಹ ಅವರು ಭೇಟಿ ನೀಡಲಿದ್ದಾರೆ. ಪಾಕಿಸ್ತಾನ್ ಪ್ರಧಾನಿ ನವಾಜ್ ಷರೀಫ್ ಸಹ ಆ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದು, ಉಭಯ ನಾಯಕರು ಪರಸ್ಪರ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. 
 
ಮಾರ್ಚ್ 31 ರಂದು ಪ್ರವಾಸ ಆರಂಭಸಿಲಿರುವ ಪ್ರಧಾನಿ ಮೊದಲು ಬೆಲ್ಜಿಯಂನಲ್ಲಿ ಇಂಡಿಯಾ-ಇಯು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಮಾರ್ಚ್ 31 ರಂದು ವಾಷಿಂಗ್ಟನ್‌ಗೆ ತೆರಳಲಿರುವ ಅವರು ಎಪ್ರಿಲ್2 ರಂದು ಶಕ್ತಿಶಾಲಿ ಅರಬ್ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಸೌದಿ ನಾಯಕರ ಜತೆಯಲ್ಲಿ ಅವರು ವ್ಯಾಪಾರ ಮತ್ತು ಶಕ್ತಿ ಸೇರಿದಂತೆ ಪ್ರಾದೇಶಿಕ ಮತ್ತು ದ್ವಿಪಕ್ಷಿಯ ವಹಿವಾಟು ಕುರಿತು ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. 
 
ಆರು ವರ್ಷಗಳಲ್ಲಿ ಬಳಿಕ ಸೌದಿಗೆ ಭಾರತ ಪ್ರಧಾನಿಯೊಬ್ಬರು ಪ್ರವಾಸ ಹೋಗುತ್ತಿದ್ದು ಈ ಭೇಟಿ ಬಹಳ ಮಹತ್ವವನ್ನು ಪಡೆದಿದೆ. 

ವೆಬ್ದುನಿಯಾವನ್ನು ಓದಿ