ನಾಳೆ ವಿಯಟ್ನಾಂ, ಚೀನಾ ದೇಶಗಳಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಗುರುವಾರ, 1 ಸೆಪ್ಟಂಬರ್ 2016 (20:10 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರದಂದು ದ್ವಿಪಕ್ಷೀಯ ಮಾತುಕತೆಗಾಗಿ ವಿಯಟ್ನಾಂ ದೇಶಕ್ಕೆ ತೆರಳಿದ್ದು, ನಂತರ ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ವಿಯಟ್ನಾಂ ದೇಶದ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ನಂತರ ಸೆಪ್ಟೆಂಬರ್ 3 ರಂದು ಚೀನಾಗೆ ತೆರಳಲಿದ್ದು ಸೆಪ್ಟೆಂಬರ್ 4 ಮತ್ತು 5 ರಂದು ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 5 ರಂದೇ ಭಾರತಕ್ಕೆ ಮರಳಿ ಮಾರನೇ ದಿನ ಇಂಡಿಯಾ ಏಷ್ಯನ್ ಮತ್ತು ಈಸ್ಟ್ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಲಾವೋಸ್‌ಗೆ ತೆರಳಲಿದ್ದಾರೆ.    
 
ವಿಯಟ್ನಾಂನಲ್ಲಿ ಪ್ರದಾನಿ ಮೋದಿ , ರಕ್ಷಣಾ ಇಲಾಖೆ, ಭದ್ರತೆ ಮತ್ತು ವಹಿವಾಟು, ತೈಲ ವಿನಿಮಯ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ದೇಶದ ಪ್ರಮುಖ ತೈಲ ಕಂಪೆನಿಯಾಗಿರುವ ಒಎನ್‌ಜಿಸಿ ವಿದೇಶ ಲಿಮಿಟೆಡ್, ವಿಯಟ್ನಾಂನಲ್ಲಿ ಕಲೆದ ಮೂರು ದಶಕಗಳಿಂದ ತೈಲ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೂತನ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ