ಮೋದಿ ತಮ್ಮ ವೈಯಕ್ತಿಕ ಸಾರ್ವಜನಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವಲ್ಲಿ ವ್ಯಸ್ತರಾಗಿದ್ದಾರೆ: ರಾಹುಲ್ ಗಾಂಧಿ

ಬುಧವಾರ, 28 ಜನವರಿ 2015 (17:39 IST)
ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಂತ ಸಾರ್ವಜನಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಲ್ಲೇ ವ್ಯಸ್ತರಾಗಿದ್ದು, ಅಭಿವೃದ್ಧಿಗೆ ಭದ್ರ ತಳಹದಿ ಕಟ್ಟುವ ದಿಶೆಯಲ್ಲಿ ಅವರೇನು ಮಾಡಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
 
ದೆಹಲಿ ವಿಧಾನಸಭಾ ಚುನಾವಣೆಗಾಗಿ ರೋಡ್ ಶೋ ನಡೆಸುತ್ತ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಎನ್‌ಡಿಎ ಸರಕಾರ ಕಳೆದ ಮೇ ತಿಂಗಳಲ್ಲಿ ಅಧಿಕಾರಕ್ಕೇರಿತ್ತು. ಆದರೆ, ಪ್ರಧಾನಿ ಕೇವಲ ತಮ್ಮ ವೈಯಕ್ತಿಕ ಸಾರ್ವಜನಿಕ ಸಂಬಂಧಗಳನ್ನು ಕಟ್ಟಿಕೊಳ್ಳುವಲ್ಲಿ ತಲ್ಲೀನರಾಗಿದ್ದಾರೆ. ಅಭಿವೃದ್ಧಿಪರ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ  ಎಂದು ವಾಗ್ದಾಳಿ ನಡೆಸಿದರು. 
 
ಜನರು ಮೋದಿಯವರೇ ನೀವು ಮಾತನಾಡುವುದನ್ನು ನಿಲ್ಲಿಸಿ ಕೆಲಸ ಮಾಡಲು ಯಾವಾಗ ಪ್ರಾರಂಭಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ.  ನೀವು ಕೆಲವರ ಕಡೆ ಒಲವು ತೋರಿಸುತ್ತಿದ್ದೀರಿ. ಆದರೆ ಬಡವರಿಗಾಗಿ ಏನನ್ನು ಮಾಡುತ್ತಿಲ್ಲ ಎಂದು ರಾಹುಲ್ ಕಿಡಿಕಾರಿದ್ದಾರೆ. 
 
ಕಾಂಗ್ರೆಸ್ ಬಡವರ ಪರವಾದ ಪಕ್ಷ. ನಾವು ಬಡವರ ಪರ ನಿಂತಿದ್ದೆವು. ಆದ್ದರಿಂದ ನಾವು ಮತ್ತೆ ಅಧಿಕಾರಕ್ಕೆ ಹಿಂತಿರುಗುತ್ತೇವೆ. ಬಡವರ ಕೈ ಹಿಡಿದು  ವಿಕಾಸದ ಹಾದಿಯಲ್ಲಿ ಕರೆದೊಯ್ಯುತ್ತೇವೆ ಎಂದು ಗಾಂಧಿ ಮತದಾರರ ಮನವೊಲಿಕೆಗೆ ಪ್ರಯತ್ನಿಸಿದರು. 

ವೆಬ್ದುನಿಯಾವನ್ನು ಓದಿ