ಸೋನಿಯಾ ಜನ್ಮದಿನ: ಮೋದಿ ಶುಭಾಶಯ

ಶುಕ್ರವಾರ, 9 ಡಿಸೆಂಬರ್ 2016 (14:44 IST)
ತಮ್ಮ 70ನೇ ಜನ್ಮದಿನವನ್ನಾಚರಿಸಿಕೊಳ್ಳುತ್ತಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜನ್ಮದಿನಕ್ಕೆ ಪ್ರಧಾನಿ ಮೋದಿ ಶುಭ ಕೋರಿದ್ದು ದೀರ್ಘ ಆಯುಷ್ಯ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ. 
ಮೋದಿ ಅವರ ಟ್ವೀಟ್ ಹೀಗಿದೆ, "ಸೋನಿಯಾ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯದಿಂದ ಕೂಡಿದ ದೀರ್ಘಾಯುಷ್ಯವನ್ನು ಕರುಣಿಸಲಿ".
 
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷ ಮೋದಿ ಸರ್ಕಾರದ ವಿರುದ್ಧ ಅವ್ಯಾಹತವಾಗಿ ವಾಗ್ದಾಳಿ ನಡೆಸುತ್ತಿರುವ ಮಧ್ಯೆಯೂ ಪ್ರಧಾನಿ ಸೋನಿಯಾ ಅವರಿಗೆ ಶುಭ ಕೋರಿದ್ದಾರೆ. 
 
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ನಿನ್ನೆ ಸಂಪೂರ್ಣ ರೋಮ್ ಹೊತ್ತಿ ಉರಿಯುವಾಗ ಪಿಟೀಲು ಬಾರಿಸುತ್ತಿದ್ದ 'ರೋಮನ್ ಚಕ್ರವರ್ತಿ ನೀರೋ'ಗೆ ಹೋಲಿಸಿದ್ದಾರೆ.
 
ನೋಟು ನಿಷೇಧವನ್ನು ವಿರೋಧಿಸಿ ಡಿಸೆಂಬರ್ 8ರಂದು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ್ದು ದಿಟ್ಟ ನಿರ್ಧಾರವಲ್ಲ. ದೊಡ್ಡ ಮುಖಬೆಲೆ ನೋಟುಗಳ ನಿಷೇಧ ಬಳಿಕ ಪೇಟಿಎಂ ಹಾಗೂ ಇ-ವಾಲೆಟ್ ಸಂಸ್ಥೆಗಳಿಗೆ ಹೆಚ್ಚಿನ ಲಾಭವಾಗುತ್ತಿದೆ. ಪೇಟಿಎಂ ಅಂದರೆ 'ಪೇ ಟು ಮೋದಿ' ಎಂದು ರಾಹುಲ್ ವ್ಯಂಗ್ಯವಾಡಿದ್ದರು. 

ವೆಬ್ದುನಿಯಾವನ್ನು ಓದಿ