ಪ್ರಧಾನಿ ನರೇಂದ್ರ ಮೋದಿ ವಿಶ್ವದ 13ನೇ ಪ್ರಭಾವಶಾಲಿ ವ್ಯಕ್ತಿ: ಬ್ಲೂಮ್‌ಬರ್ಗ್

ಸೋಮವಾರ, 5 ಅಕ್ಟೋಬರ್ 2015 (20:09 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವದ 13ನೇ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮೊದಲನೇ ಸ್ಥಾನದಲ್ಲಿ ಅಮೆರಿಕದ ರಿಸರ್ವ್ ಬ್ಯಾಂಕ್ ಮುಖ್ಯಸ್ಥ ಜಾನೆಟ್ ಯೆಲ್ಲೆನ್ ಅಗ್ರಸ್ಥಾನ ಪಡೆದಿದ್ದಾರೆ ಎಂದು ಬ್ಲೂಮ್‌ಬರ್ಗ್ ಮಾರ್ಕೆಟ್ ವರದಿಯಲ್ಲಿ ತಿಳಿಸಿದೆ. 
 
ಬ್ಲೂಮ್‌ಬರ್ಗ್ ಪಟ್ಟಿಯಲ್ಲಿ ಪ್ರಧಾನಿ ಮೋದಿ ವಿಶ್ವದ 13ನೇ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ಟಾಪ್ 50 ರ ಪಟ್ಟಿಯಲ್ಲಿ ಏಷ್ಯಾ ಮೂಲದವರು ಮೊದಲ ಬಾರಿಗೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.   
 
ವಿಶ್ವದ ಪ್ರಭಾವಶಾಲಿಗಳ ಪಟ್ಟಿಯಲ್ಲಿ ಅಮೆರಿಕ ರಿಸರ್ವ್ ಬ್ಯಾಂಕ್‌ನ ಮುಖ್ಯಸ್ಥ ಜಾನೆಟ್ ಯೆಲ್ಲೆನ್ ಮೊದಲ ಸ್ಥಾನದಲ್ಲಿದ್ದರೆ, ಚೀನಾದ ಅಧ್ಯಕ್ಷ ಝಿ ಜಿನ್‌‍ಪಿಂಗ್ ಎರಡನೇ ಸ್ಥಾನದಲ್ಲಿದ್ದಾರೆ, ಟಿಮ್ ಕುಕ್ ಮೂರನೇ ಸ್ಥಾನ ಪಡೆದಿದ್ದಾರೆ.  
 
ಬ್ಲ್ಯಾಕ್‌ರಾಕ್ ಸಹ-ಸಂಸ್ಥಾಪಕ ಲಾರ್ರಿ ಫಿಂಕ್ ನಾಲ್ಕನೇ ಸ್ಥಾನದಲ್ಲಿದ್ದರೆ ಬರ್ಕ್‌ಶೈರ್ ಹಾಥ್‌ವೇ ಸಿಇಒ ವಾರೆನ್ ಬಫೆಟ್ ಐದನೇ  ಸ್ಥಾನದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ