ಮೇಕ್ ಇನ್ ಇಂಡಿಯಾ ವೀಕ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ಶನಿವಾರ, 13 ಫೆಬ್ರವರಿ 2016 (14:50 IST)
ದೇಶದಲ್ಲಿ ಉತ್ಪಾದನೆ ಕ್ಷೇತ್ರಕ್ಕೆ ಹೊಸ ವಿನ್ಯಾಸದಲ್ಲಿ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎಂಎಂಆರ್‌ಡಿಎ ಕ್ರೀಡಾಂಗಣದಲ್ಲಿ ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ.
 
ಪ್ರಧಾನಿ ಮೋದಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಮಹಾರಾಷ್ಟ್ರದ ರಾಜ್ಯಪಾಲ ಸಿ.ವಿ.ರಾವ್ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಸ್ವಾಗತಿಸಿದರು.
 
ಮೇಕ್ ಇನ್ ಇಂಡಿಯಾ ವೀಕ್ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಆಗಮಿಸಿದ ಗಣ್ಯರ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.
 
ಸ್ವಿಡನ್ ಪ್ರಧಾನಿ, ಫಿನ್‌ಲ್ಯಾಂಡ್ ಪ್ರಧಾನಿ ಮತ್ತು ದೇಶ ವಿದೇಶಗಳಿಂದ ಆಗಮಿಸಿದ ಗಣ್ಯರೊಂದಿಗೆ ಪ್ರಧಾನಿ ಮೋದಿ ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 
ಪ್ರಧಾನಿ ಮೋದಿ ವಿದೇಶಗಳಿಂದ ಬಂದ ಹಿರಿಯ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಗಳಿವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ