ನಾಳೆ ಬ್ರೂಸೆಲ್ಸ್‌ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ

ಸೋಮವಾರ, 28 ಮಾರ್ಚ್ 2016 (20:24 IST)
ಬೆಲ್ಜಿಯಂ ರಾಜಧಾನಿ ಬ್ರೂಸೆಲ್ಸ್‌ನಲ್ಲಿ ಉಗ್ರರ ಬಾಂಬ್ ದಾಳಿ ನಡೆದ ವಾರದ ನಂತರ ಪ್ರಧಾನಿ ನರೇಂದ್ರ ಮೋದಿ ನಾಳೆ ಬ್ರೂಸೆಲ್ಸ್‌ಗೆ ತೆರಳಲಿದ್ದಾರೆ.
 
ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ವಾಷಿಂಗ್ಟನ್‌ ಮತ್ತು ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಪರಮಾಣು ಭಧ್ರತಾ ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. 
 
ಬ್ರೂಸೆಲ್ಸ್‌ನಲ್ಲಿ ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದಿರುವ ಇಂಡಿಯಾ-ಯುರೋಪ್ ಶೃಗಂಸಭೆಗೆ ಹಾಜರಾಗಲಿದ್ದಾರೆ. ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್‌ ಮಿಚೈಲ್ ಅವರನ್ನು ಭೇಟಿ ಮಾಡಿ ಭಯೋತ್ಪಾದನೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬ್ರೂಸೆಲ್ಸ್ ಮೇಲೆ ನಡೆದ ಉಗ್ರರ ದಾಳಿ ಚರ್ಚೆಯ ಭಾಗಗಳಲ್ಲಿ ಒಂದಾಗಿದೆ. ವಾಸ್ತವವೆಂದರೆ,ಭಯೋತ್ಪಾದನೆ ಚರ್ಚೆಯ ಪ್ರಮುಖ ವಿಷಯವಾಗಲಿದೆ ಎಂದು ಯುರೋಪ್ ಜಂಟಿ ಕಾರ್ಯದರ್ಶಿ ನಂದಿನಿ ಸಿಂಗ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಪ್ರಧಾನಿ ಮೋದಿ ದೇಶದ ಖ್ಯಾತ ಉದ್ಯಮಿಗಳು ಸಂಸದರು ಮತ್ತು ಖ್ಯಾತನಾಮ ಗಣ್ಯರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.  

ವೆಬ್ದುನಿಯಾವನ್ನು ಓದಿ