ಕ್ರಿಕೆಟಿಗ ಹ್ಯೂಸ್‌ಗೆ ಅಂತಿಮ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಬುಧವಾರ, 3 ಡಿಸೆಂಬರ್ 2014 (14:41 IST)
ತಲೆಗೆ ಬೌನ್ಸರ್ ತಗುಲಿ ದುರ್ಮರಣವನ್ನಪ್ಪಿದ ಆಸ್ಟ್ರೇಲಿಯಾದ ಯುವ ಕ್ರಿಕೆಟಿಗ ಫಿಲಿಪ್ ಹ್ಯೂಸ್‌ಗೆ ಪ್ರಧಾನಿ ನರೇಂದ್ರ ಮೋದಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಈ ಮೂಲಕ ಹ್ಯೂಸ್ ಮರಣದ ಶೋಕಾಚರಣೆಯಲ್ಲಿ ಮುಳುಗಿರುವ ಕ್ರಿಕೆಟ್ ವಿಶ್ವಕ್ಕೆ ಮೋದಿಯು ಸೇರ್ಪಡೆಗೊಂಡಿದ್ದಾರೆ.

ಕ್ರಿಕೆಟಿಗನ ತವರು ಮ್ಯಾಕ್‌ವಿಲ್ಲೆಯಲ್ಲಿ ಇಂದು ನಡೆದ ಅಂತಿಮ ಸಂಸ್ಕಾರ ಸಮಾರಂಭದಲ್ಲಿ ಅವರಿಗೆ ಭಾವಪೂರ್ಣ ಕೊನೆಯ ನಮನಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ  ಮೋದಿ "ಆಸ್ಟ್ರೇಲಿಯಾದಲ್ಲಿ  ಹ್ಯೂಸ್ ಅವರಿಗೆ ಹೃದಯಸ್ಪರ್ಶಿ ಗೌರವವನ್ನು ಸಲ್ಲಿಸಲಾಗುತ್ತಿದೆ. ಫಿಲ್ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅದ್ಭುತ ಆಟ &  ಚುರುಕಿನ ವ್ಯಕ್ತಿತ್ವದಿಂದಾಗಿ ನೀವು ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದೀರಾ!" ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಟ್ವಿಟ್ ಮಾಡಿದ್ದಾರೆ.
 
ಕಳೆದ ನವೆಂಬರ್ 24 ರಂದು ದೇಶಿಯ ಪಂದ್ಯವೊಂದರಲ್ಲಿ ಆಡುತ್ತಿದ್ದ ವೇಳೆ ಬೌನ್ಸರ್ ಬಾಲ್ ಒಂದು ತಲೆಗೆ ಬಡಿದ ಪರಿಣಾಮ ಅಲ್ಲಿಯೇ ಕುಸಿದು ಬಿದ್ದ 25 ರ ಹರೆಯದ ಹ್ಯೂಸ್ ಕೋಮಾ ಸ್ಥಿತಿಗೆ ಜಾರಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 26 ರಂದು ಅವರು ಕೊನೆಯುಸಿರೆಳೆದಿದ್ದರು. ಇಡೀ ಕ್ರಿಕೆಟ್ ಜಗತ್ತು ಹ್ಯೂಸ್ ಸಾವಿಗೆ ಕಂಬನಿ ಮಿಡಿದಿದೆ.

ವೆಬ್ದುನಿಯಾವನ್ನು ಓದಿ