ಪ್ರಧಾನಿ ಮೋದಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ನಮ್ಮಲ್ಲಿ ದಾಖಲೆ ಇದೆ ಎಂಬ ರಾಹುಲ್ ಗಾಂಧಿಯವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಹಿರಿಯ ನಾಯಕ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ರಾಹುಲ್ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತ ಮತ್ತು ಸಮರ್ಥನೀಯವಲ್ಲದ್ದು. ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ರಾಹುಲ್ ಕುಟುಂಬದವರ ಹೆಸರು ಕೇಳಿ ಬರುತ್ತಿದೆ. ಇದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಹುಲ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ನಾನು ರಾಹುಲ್ ಅವರು ಮಾಡಿರುವ ಬೇಜವಾಬ್ದಾರಿಯುತ, ನಾಚಿಕೆಗೇಡು ಹೇಳಿಕೆಯನ್ನು ಖಂಡಿಸುತ್ತೇನೆ. ಜನರು ಇದನ್ನು ಎಂದಿಗೂ ನಂಬುವುದಿಲ್ಲ. ಭ್ರಷ್ಟಾಚಾರದ ಗಾರ್ಡಿಯನ್ ಎನ್ನಿಸಿಕೊಂಡಿರುವ ಕಾಂಗ್ರೆಸ್‌ನ್ನು ಪ್ರತಿನಿಧಿಸುವ ರಾಹುಲ್ ಅವರಿಂದ ಹೆಚ್ಚಿನದೇನೂ ಅಪೇಕ್ಷಿಸುವುದು ಸರಿಯಲ್ಲ, ಎಂದಿದ್ದಾರೆ ಪ್ರಸಾದ್.