ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಮೋದಿ ಹೆಚ್ಚಿನ ಶಕ್ತಿ ವ್ಯಯಸುತ್ತಿದ್ದಾರೆ: ಆರೆಸ್ಸೆಸ್ ಕಿಡಿ

ಶುಕ್ರವಾರ, 31 ಜುಲೈ 2015 (15:48 IST)
ಪಾಕಿಸ್ತಾನದೊಂದಿಗೆ ಮಾತುಕತೆಗೆ ಮುಂದಾಗಿರುವ ಕೇಂದ್ರ ಸರಕಾರದ ನಿಲುವಿಗೆ ಆಕ್ರೋಶ ವ್ಯಕ್ತಪಡಿಸಿರುವ ಆರೆಸ್ಸೆಸ್ ನಾಯಕರು, ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದರಿಂದ ಯಾವುದೇ ಲಾಭವಿಲ್ಲ ಎನ್ನುವುದು ಅವರು ತಿಳಿದುಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದೆ.     
ಪಂಜಾಬ್‌ನ ಗುರುದಾಸ್‌ಪುರ್ ಜಿಲ್ಲೆಯ ದೀನಾನಗರ್ ಪಟ್ಟಣದಲ್ಲಿ ದಾಳಿ ನಡೆಸಿದ ಉಗ್ರರು ಪಾಕ್ ಮೂಲದವರು ಎನ್ನುವುದು ಬಹಿರಂಗವಾಗುತ್ತಿದ್ದಂತೆ ಪಾಕ್‌ನೊಂದಿಗೆ ದ್ವಿಪಕ್ಷಿಯ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು  ಸೈದ್ದಾಂತಿಕವಾಗಿ ಬಿಜೆಪಿ ಪಕ್ಷದ ಮಾರ್ಗದರ್ಶಿಯಾದ ಆರೆಸ್ಸೆಸ್‌ ಖಡಕ್ಕಾಗಿ ಮೋದಿ ಸರಕಾರಕ್ಕೆ ಸಂದೇಶ ರವಾನಿಸಿದೆ.    
 
ಪ್ರಧಾನಮಂತ್ರಿ ಮೋದಿ ನೇತೃತ್ವದ ಸರಕಾರ ಪಾಕ್ ಆಕ್ರಮಿತ ಕಾಶ್ಮಿರದಲ್ಲಿರುವ ಐಎಸ್‌ಐ ಬೆಂಬಲಿತ ಉಗ್ರರ ಶಿಬಿರಗಳನ್ನು ನಾಶಪಡಿಸುವಂತೆ ಆರೆಸ್ಸೆಸ್ ಮೋದಿ ಸರಕಾರವನ್ನು ಒತ್ತಾಯಿಸುತ್ತಿದೆ. 
 
ಆರೆಸ್ಸೆಸ್ ಮತ್ತು ಅಂತಾರಾಷ್ಟ್ರೀಯ ಸಮುದಾಯದ ನಿರೀಕ್ಷೆಗಳ ಮಧ್ಯೆ ಸಿಲುಕಿರುವ ಮೋದಿ ಸರಕಾರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮಟ್ಟದಲ್ಲಿ ಮಾತುಕತೆಗೆ ಮುಂದಾಗಿದೆ. ಆದರೆ, ಮಾತುಕತೆ ಹಿಂದಕ್ಕೆ ಪಡೆಯುವ ಅವಕಾಶವನ್ನು ಸರಕಾರ ಕಾಯ್ದಿರಿಸಿಕೊಂಡಿದೆ.
 
ರಷ್ಯಾದ ಉಫಾದಲ್ಲಿ ನಡೆದ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ನವಾಜ್ ಷರೀಫ್ ಮಧ್ಯೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವುದು ಅಗತ್ಯವಾಗಿದೆ. ಇದರಿಂದ ಪಾಕ್‌ನ ನಿಲುವು ಬಹಿರಂಗವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ