ಆಫ್ರಿಕಾ ಪ್ರವಾಸಕ್ಕೆ ಹೊರಟಿದ್ದಾರೆ ಪ್ರಧಾನಿ ಮೋದಿ

ಬುಧವಾರ, 29 ಜೂನ್ 2016 (17:45 IST)
ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಆಫ್ರಿಕಾ ಖಂಡದ 4 ದೇಶಗಳಿಗೆ ಐದು ದಿನದ ಪ್ರವಾಸ ಹೊರಟಿದ್ದಾರೆ. ಜುಲೈ 7 ರಿಂದ 11ರವರೆಗೆ ಅವರು ತಾಂಜೇನಿಯ, ದಕ್ಷಿಣ ಆಫ್ರಿಕಾ, ಕೀನ್ಯಾ, ಮೊಜಾಂಬಿಕ್​ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಕಳೆದೊಂದು ತಿಂಗಳಲ್ಲಿ ಈ ರಾಷ್ಟ್ರಗಳಿಗೆ ಉಪರಾಷ್ಟ್ರಪತಿ, ರಾಷ್ಟ್ರಪತಿ ಭೇಟಿ ಬೆನ್ನ ಹಿಂದೆಯೇ ಪ್ರಧಾನಿ ಕೂಡ ಆಫ್ರಿಕನ್ ದೇಶಗಳಿಗೆ ಪ್ರವಾಸ ಹೊರಟಿದ್ದಾರೆ.

ಮೊಜಾಂಬಿಕ್​‌ನಲ್ಲಿ (ಜುಲೈ) ಸಂಪೂರ್ಣ ಒಂದು ದಿನ ತಂಗಲಿರುವ ಪ್ರಧಾನಿ, 8-9 ರಂದು ಆಫ್ರಿಕಾದ ಬಹುದೊಡ್ಡ ಆರ್ಥಿಕ ಶಕ್ತಿಯಾದ ದಕ್ಷಿಣ ಆಫ್ರಿಕಾದಲ್ಲಿರಲಿದ್ದಾರೆ. ಜುಲೈ 10 ರಂದು ತಾಂಜಾನಿಯಾ ಮತ್ತು ಜುಲೈ 11 ರಂದು ಅವರು ಕೀನ್ಯಾ ಪ್ರವಾಸದಲ್ಲಿರಲಿದ್ದಾರೆ. 
 
ಈ ಪ್ರವಾಸದ ವೇಳೆ ಮೋದಿ ಸಮುದ್ರ ಮಾರ್ಗದ ವಹಿವಾಟಿನ (ಬ್ಲೂ ಇಕಾನಮಿ) ಬಗೆಗಿನ ಒಪ್ಪಂದಗಳಿಗೆ ಹೆಚ್ಚಿನ ಪ್ರಾಶಸ್ತ ನೀಡಲಿದ್ದಾರೆಂದು ತಿಳಿದು ಬಂದಿದೆ. ಜತೆಗೆ ಇಂಧನ, ಆಹಾರ ಭದ್ರತೆ, ಕೌಶಲಾಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಚರ್ಚೆಯಾಗಲಿದೆ.
 
ದಕ್ಷಿಣ ಆಫ್ರಿಕಾದ ಜೋಹಾನ್ಸ‌ಬರ್ಗ್‌ನಲ್ಲಿ ಮೋದಿ ಅವರು ಭಾರತೀಯ ಮೂಲದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈಗಾಗಲೇ 8,000ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿಕೊಂಡಿದ್ದು ಈ ಸಂಖ್ಯೆ 10,000 ದಾಟುವ ನಿರೀಕ್ಷೆ ಇದೆ.  

ವೆಬ್ದುನಿಯಾವನ್ನು ಓದಿ