ದೇಶದ ಮೂರ್ನಾಲ್ಕು ಉದ್ಯಮಿಗಳನ್ನು ಸಂತೃಪ್ತಗೊಳಿಸುವುದೇ ಪ್ರಧಾನಿ ಮೋದಿ ಗುರಿ : ರಾಹುಲ್ ಗಾಂಧಿ

ಶುಕ್ರವಾರ, 5 ಫೆಬ್ರವರಿ 2016 (17:03 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಕೇವಲ ಮೂರು ಅಥವಾ ನಾಲ್ಕು ಉದ್ಯಮಿಗಳಿಗಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ.
 
ಬಡವರು ಮತ್ತು ರೈತರ ಪರ ಕಾರ್ಯನಿರ್ವಹಿಸುವಂತಾಗಲು ಪ್ರಧಾನಿ ಮೋದಿ ಸರಕಾರದ ನಿರಂತರವಾಗಿ ಒತ್ತಡ ಹೇರಲಾಗುವುದು. ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೆ ದೇಶದ ಜನತೆಯ ಕ್ಷಮೆ ಕೋರುವಂತಹ ಸ್ಥಿತಿ ಮೋದಿಯವರಿಗೆ ಬಂದಿದೆ ಎಂದು ಲೇವಡಿ ಮಾಡಿದರು.  
 
ಕಳೆದ ಒಂದು ವರೆ ವರ್ಷದಲ್ಲಿ ಪ್ರಧಾನಿ ಮೋದಿ ಜನತೆಗೆ ನೀಡಿದ ಯಾವುದೇ ಭರವಸೆ ಈಡೇರಿಸಿಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಪ್ರಧಾನಿ ಕರ್ತವ್ಯ. ಕೇವಲ ತಪ್ಪುಗಳಾಗಿವೆ ಕ್ಷಮಿಸಿ ಎಂದು ಕೋರುವುದಲ್ಲ ಎಂದು ವಾಗ್ದಾಳಿ ನಡೆಸಿದರು.
 
ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಉತತ್ಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೃಹತ್ ಕೈಗಾರಿಕೋದ್ಯಮಿಗಳು ಕೂಡಾ ನಮ್ಮ ಮುಂದೆ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
 
ಸಂಸತ್ತಿನಲ್ಲಿ ಒಂದು ಕುಟುಂಬ ಮಾತ್ರ ಋುಣಾತ್ಮಕ ರಾಜಕೀಯದಲ್ಲಿ ತೊಡಗಿದೆ. ಇತರ ವಿಪಕ್ಷಗಳ ನಾಯಕರು ತಮ್ಮನ್ನು ವಿರೋಧಿಸುತ್ತಿದ್ದರೂ ಸಂಸತ್ ಕಲಾಪ ನಡೆಯಲು ಬಯಸುತ್ತಾರೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನ ಟೀಕಿಸಿದ್ದರು.

ವೆಬ್ದುನಿಯಾವನ್ನು ಓದಿ