ಬಿಜೆಪಿ ಮುಖಂಡರು ಜನತೆಯ ಧ್ವನಿ ಅಡಗಿಸುತ್ತಿದ್ದಾಗ ಮೋದಿ ಮೌನವಾಗಿದ್ದರು: ರಾಹುಲ್

ಮಂಗಳವಾರ, 1 ಡಿಸೆಂಬರ್ 2015 (18:55 IST)
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಅಸಹಿಷ್ಣುತೆ ಕುರಿತಂತೆ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ನಾಯಕರು ಜನತೆಯ ಧ್ವನಿಯನ್ನು ಅಡಗಿಸಲು ಯತ್ನಿಸಿದಾಗ, ದಾದ್ರಿ ಹತ್ಯೆ ಘಟನೆ ನಡೆದಾಗ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನವಾಗಿದ್ದರು ಎಂದು ಪ್ರಶ್ನಿಸಿದರು.
 
ಚರ್ಚಾಕೂಟದಲ್ಲಿ ಪಾಲ್ಗೊಂಡ ರಾಹುಲ್, ದಲಿತ ಮಕ್ಕಳನ್ನು ನಾಯಿಗಳು ಎಂದು ಹೋಲಿಕೆ ಮಾಡಿದ ಕೇಂದ್ರ ಸಚಿವ ವಿ.ಕೆ.ಸಿಂಗ್‌ರನ್ನು ಸಂಪುಟದಲ್ಲಿ ಮುಂದುವರಿಸಿರುವ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
 
ದಲಿತ ಮಕ್ಕಳನ್ನು ನಾಯಿಗಳಿಗೆ ಹೋಲಿಕೆ ಮಾಡಿದ ಸಚಿವ ವಿ.ಕೆ.ಸಿಂಗ್ ದೇಶದ ಸಂವಿಧಾನಕ್ಕೆ ಸವಾಲೊಡ್ಡಿದ್ದರು. ಆದರೆ, ಪ್ರಧಾನಿ ಮೋದಿ ಅವರನ್ನು ಸಚಿವರಾಗಿ ಮುಂದುವರಿಸುತ್ತಾರೆ ಎಂದು ಲೇವಡಿ ಮಾಡಿದರು.
 
ಕೆಲ ದಿನಗಳ ಹಿಂದೆ ಪ್ರಧಾನಿ ಸಂಸತ್ತಿನಲ್ಲಿ ನಮ್ಮ ಸಂವಿಧಾನದ ಬಗ್ಗೆ ಹೇಳಿಕೆ ನೀಡುತ್ತಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಬಗ್ಗೆ ಎರಡು ಮಾತುಗಳನ್ನು ಹೇಳುತ್ತಾರೆ. ಮೋದಿ ವಿಚಾರಧಾರೆ ನಮ್ಮ ವಿಚಾರಧಾರೆಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದರು.
 
ದಾದ್ರಿ ಹತ್ಯೆ ಘಟನೆ ಪ್ರಸ್ತಾಪಿಸಿದ ರಾಹುಲ್, ಗೋಮಾಂಸ ಸೇವಸಿದ್ದಾನೆ ಎಂದು ಆರೋಪಿಸಿ ದಾದ್ರಿಯ ಮೊಹಮ್ಮದ್ ಅಖಲಖ್ ಎನ್ನುವ ಮುಸ್ಲಿಂ ವ್ಯಕ್ತಿಯ ಹತ್ಯೆ ಮಾಡಲಾಗಿದೆ. ಪ್ರಧಾನಿ ಮೋದಿ ಅವರ ಕುಟುಂಬದವರೊಂದಿಗೆ ಸಂವಾದ ನಡೆಸಿ ಭಾರತ ಸುರಕ್ಷಿತವಾಗಿದೆ ಎನ್ನುವ ಭರವಸೆ ನೀಡಬೇಕಾಗಿರುವುದು ಅವರ ಕರ್ತವ್ಯವಾಗಿತ್ತು. ಆದರೆ, ಮೋದಿಯವರಿಗೆ ಸಮಯವಕಾಶವಿಲ್ಲ ಎಂದು ಲೇವಡಿ ಮಾಡಿದರು.

ವೆಬ್ದುನಿಯಾವನ್ನು ಓದಿ