ಭೋಸ್ ಕುಟುಂಬವನ್ನು ಭೇಟಿ ಮಾಡಲಿರುವ ಪ್ರಧಾನಿ ಮೋದಿ

ಬುಧವಾರ, 30 ಸೆಪ್ಟಂಬರ್ 2015 (14:12 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತಾಜಿ ಸುಭಾಷ್ ಚಂದ್ರ ಭೋಸ್ ಕುಟುಂಬದ ಸದಸ್ಯರನ್ನು ಆಕ್ಟೋಬರ್ 14 ರಂದು ಭೇಟಿ ಮಾಡಲಿದ್ದಾರೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ.
 
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಡುಗಡೆಗೊಳಿಸಿದ ನೇತಾಜಿಯವರ ದಾಖಲೆಗಳ ಬಗ್ಗೆ ಪ್ರಧಾನಿ ಮೋದಿ, ನೇತಾಜಿ ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
 
ಕಳೆದ ಐದು ದಿನಗಳಿಂದ ಅಮೆರಿಕ ಪ್ರವಾಸದಲ್ಲಿದ್ದ ಮೋದಿ ಹಲವಾರು ಜಾಗತಿಕ ನಾಯಕರನ್ನು ಭೇಟಿ ಮಾಡಿದ್ದರು, ಜಾಗತಿಕ ದೈತ್ಯ ಕಂಪೆನಿಗಳಾದ ಫೇಸ್‌ಬುಕ್ ಮತ್ತು ಗೂಗಲ್ ಕಚೇರಿಗಳಿಗೆ ಭೇಟಿ ನೀಡಿ ಕಂಪೆನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ್ದರು.
 
ಪ್ರಧಾನಿ ಮೋದಿ ಅಕ್ಟೋಬರ್ 14 ರಂದು ನಮ್ಮ ಕುಟುಂಬದ ಸದಸ್ಯರನ್ನು ಭೇಟಿ ಮಾಡಲಿದ್ದಾರೆ ಎಂದು ನೇತಾಜಿಯವರ ಮೊಮ್ಮಗ ಚಂದ್ರ ಭೋಸ್ ಮತ್ತು ನೇತಾಜಿ ಸಹೋದರ ಸರತ್ ಚಂದ್ರ ಭೋಸ್ ತಿಳಿಸಿದ್ದಾರೆ. 
 
ಕಳೆದ ಮೇ ತಿಂಗಳಲ್ಲಿ ಕೋಲ್ಕತಾಗೆ ಭೇಟಿ ನೀಡಿದ್ದ ಮೋದಿ, ನೇತಾಜಿ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ದೆಹಲಿಯ ಅಧಿಕೃತ ಕಚೇರಿಯಲ್ಲಿ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು.
 
ನೇತಾಜಿ ಕುಟುಂಬದ 50 ಸದಸ್ಯರು ಪ್ರಧಾನಿಯವರ ರೇಸ್ ಕೋರ್ಸ್ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ