ಶೀನಾ ಬೋರಾ ಬುರುಡೆ, ಎಲುಬು, ಸೂಟ್ ಕೇಸ್ ಪತ್ತೆ

ಶನಿವಾರ, 29 ಆಗಸ್ಟ್ 2015 (09:17 IST)
ಕ್ಷಣಕ್ಕೊಂದು ತಿರುವು ಪಡೆಯುತ್ತಿರುವ ಶೀನಾ ಬೋರಾ ಹತ್ಯೆಗೆ ಸಂಬಂಧಿಸಿದಂತೆ ನಡೆದ ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸರು ಮೃತಳನ್ನು ಹುಗಿಯಲಾಗಿದ್ದ ಜಾಗದಿಂದ ಶುಕ್ರವಾರ ಎಲುಬುಗಳು, ತಲೆಬುರುಡೆ ಮತ್ತು ಸೂಟ್​ಕೇಸ್‌ನ್ನು ವಶ ಪಡಿಸಿಕೊಂಡಿದ್ದಾರೆ.

ಮಹಾರಾಷ್ಟ್ರದ ರಾಯ್ ಗಢ್ ಪ್ರದೇಶದ ಕಾಡೊಂದರಲ್ಲಿ ಶೀನಾ ಬೋರಾಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿಗಳು ಲಭ್ಯವಾಗುವ ನಿರೀಕ್ಷೆಯಿಂದ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಇವುಗಳನ್ನು 2012ರಲ್ಲಿ ಸಂಗ್ರಹಿಸಲಾಗಿದ್ದ ಆಕೆಯ ದೇಹದ ಅವಯವಗಳ ಮಾದರಿಗಳೊಂದಿಗೆ ತಾಳೆ ಹಾಕಿ ನೋಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 
 
ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿಯ ಪತ್ನಿ ಇಂದ್ರಾಣಿ ಮುಖರ್ಜಿತನ್ನ ಎರಡನೆಯ ಪತಿಯ ಜತೆ ಸೇರಿ ಮೊದಲನೆಯ ಪತಿಯ ಮಗಳಾದ ಶೀನಾ ಬೋರಾಳನ್ನು ಹತ್ಯೆ ಮಾಡಿದ್ದಾಳೆಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ