ಅಧಿಕಾರಕ್ಕೆ ಏರಿದ ಬಳಿಕ ದೇವರಂತೆ ವರ್ತನೆ: ಮುಖಂಡರಿಗೆ ಟೀಕೆ

ಮಂಗಳವಾರ, 3 ಮಾರ್ಚ್ 2015 (12:17 IST)
ರಾಜಕೀಯ ಮುಖಂಡರು ಅಧಿಕಾರದ ಗದ್ದುಗೆ ಏರಿದ ಬಳಿಕ ತಮ್ಮನ್ನು ದೇವರೆಂದು ಪರಿಗಣಿಸುತ್ತಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಕುಮಾರ್ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ. ಹರ್ಯಾಣ ಮುಖ್ಯಮಂತ್ರಿ ಎಂ.ಎಲ್. ಕಟ್ಟಾರ್ ಅವರ ಬೆಂಗಾವಲು ವಾಹನಗಳು ಕರ್ನಾಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಯೊಬ್ಬರ ಮೇಲೆ ಹರಿದು ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಸಿಸೋಡಿಯಾ ಹೇಳಿಕೆ ಹೊರಬಿದ್ದಿದೆ.

ನಮ್ಮ ಸಚಿವರು ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಬೇಕು. ಆದರೆ ಈ ರೀತಿ ರಸ್ತೆಯಲ್ಲಿ ಈ ರೀತಿ ಜನರನ್ನು ಕೊಲ್ಲುವುದಲ್ಲ ಎಂದು ಸಿಸೋಡಿಯಾ ಹೇಳಿದರು.
 
ಹರ್ಯಾಣ ಮುಖ್ಯಮಂತ್ರಿ ಕಟ್ಟಾರ್ ಅವರ ಬೆಂಗಾವಲು ಪಡೆಗೆ ಸೇರಿದ ಪೊಲೀಸ್ ವಾಹನವು ಕರ್ನಾಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿ ಮೇಲೆ ಹರಿದಿದ್ದರಿಂದ ಅವರು ಅಸುನೀಗಿದ್ದರು. ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಚಂದೀಘಡದಿಂದ ರಾಷ್ಟ್ರದ ರಾಜಧಾನಿಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು
ವಾಹನದ ಚಾಲಕ ಸೇರಿದಂತೆ ಮೂವರು ಪೊಲೀಸರು ಕೂಡ ಈ ಘಟನೆಯಲ್ಲಿ ಗಾಯಗೊಂಡಿದ್ದರು. ಘಟನೆ ಬಳಿಕ ಎಲ್ಲಾ ಮೂವರನ್ನು ಕರ್ನಾಲ್ ಅಪಘಾತ ಚಿಕಿತ್ಸೆ ಕೇಂದ್ರಕ್ಕೆ ಸೇರಿಸಲಾಗಿದ್ದು,ಅಲ್ಲಿ ಪಾದಚಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. 

ವೆಬ್ದುನಿಯಾವನ್ನು ಓದಿ