ಯಾವಾಗಲು ಸುದ್ದಿಯಲ್ಲಿರುವ ಪೂನಂ ಮತ್ತೊಂದು ಬಾರಿ ವಿವಾದದ ಸುಳಿಗೆ ಸಿಲುಕಿದ್ದಾಳೆ. ಆರೋಪಿ ಡಿಐಜಿ ಪಾರಸ್ಕಾರ್ನೊಂದಿಗೆ ಪೂನಂ ಹತ್ತಿರದ ಸಂಬಂಧ ಹೊಂದಿದ್ದಾಳೆ. ಆದ್ದರಿಂದಲೇ ಡಿಐಜಿ ನನಗೆ ತೊಂದರೆ ನೀಡಿರಬಹುದು ಎಂದು ಮಾಡೆಲ್ ಆರೋಪಿಸಿದ್ದರಿಂದ, ಅಪರಾಧ ದಳದ ಪೊಲೀಸರು ಪೂನಂ ಅವರಿಗೆ ಡಿಐಜಿಯೊಂದಿಗಿರುವ ಸಂಬಂಧ ಪ್ರಶ್ನಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇಷ್ಟೆ ಅಲ್ಲ, ಪೀಡಿತ ಮಹಿಳೆ ಮತ್ತು ಪೂನಂ ಪಾಂಡೆ ನಡುವೆ ಕೆಲವು ಟ್ವಿಟ್ಸ್ಗಳು ಹರಿದಾಡಿವೆ. ಈ ಟ್ವಿಟ್ಸ್ಗಳನ್ನು ಪೋಲಿಸರು ತನಿಖೆ ಮಾಡುತ್ತಿದ್ದಾರೆ. ಪೂನಂ ಪಾಂಡೆ ಹೇಳಿದ್ದರಿಂದ ಡಿಐಜಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಜುಲೈ 3 ರಂದು ಮಾಡೆಲ್ ಟ್ವಿಟ್ ಮಾಡಿದ್ದಳು.