ರಾಷ್ಟ್ರಪತಿ ಪ್ರಣವ್ ಮುಖರ್ಜಿ; ಫೇಸ್‌ಬುಕ್‌ನಲ್ಲಿ 12ನೇ ಜನಪ್ರಿಯ ನಾಯಕ

ಗುರುವಾರ, 4 ಫೆಬ್ರವರಿ 2016 (16:52 IST)
ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿಯವರು ಎಷ್ಟು ಜನಪ್ರಿಯರು ಎಂಬ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹ ಜನಪ್ರಿಯತೆಯಲ್ಲಿ ಮೋದಿಯವರಿಗಿಂತ ಬಹಳ ಹಿಂದೇನಿಲ್ಲ. ಫೇಸ್‌ಬುಕ್‌ನಲ್ಲಿ ಜನಪ್ರಿಯರಾಗಿರುವ ವಿಶ್ವ ನಾಯಕರಲ್ಲಿ ಅವರು 12 ನೇ ಸ್ಥಾನದಲ್ಲಿದ್ದಾರೆ. ಪ್ರೆಸಿಡೆಂಟ್ ಆಫ್ ಇಂಡಿಯಾ ಪೇಜ್ ಕೂಡ 2015ರಲ್ಲಿ ಅತಿ ಹೆಚ್ಚು ಜನರು ಭೇಟಿ ನೀಡಿದ ದಾಖಲೆಗೆ ಪಾತ್ರವಾಗಿದೆ. 


 
ಸಾಮಾಜಿಕ ಮಾಧ್ಯಮಗಳಲ್ಲಿ ವಿಶ್ವ ನಾಯಕರು, ಸರ್ಕಾರ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳ  ಜನಪ್ರಿಯತೆ ಬಗ್ಗೆ ಬುರ್ಸನ್ ಮಾರ್ಸಟೆಲ್ಲರ್ ಒಟ್ಟು 512 ಫೇಸ್‌ಬುಕ್ ಪೇಜ್‌ಗಳನ್ನು ಗುರುತಿಸಿ ಸಂಶೋಧನೆ ನಡೆಸಿದ. 
 
ಆತನ ಅಧ್ಯಯನದಲ್ಲಿ ಬಂದ ಫಲಿತಾಂಶದ ಪ್ರಕಾರ 2015ರಲ್ಲಿ ಅತಿಯಾಗಿ ಲೈಕ್‌ ಪಡೆದ ವಿಶ್ವ ನಾಯಕರೆಂದರೆ ಬರಾಕ್ ಒಬಾಮಾ (46.41 ಮಿಲಿಯನ್) , ನರೇಂದ್ರ ಮೋದಿ (31.74 ಮಿಲಿಯನ್) ಇತ್ಯಾದಿ. ಈ ಸಾಲಿನಲ್ಲಿ ನಮ್ಮ ರಾಷ್ಟ್ರಪತಿಗಳಾದ ಪ್ರಣವ್ ಮುಖರ್ಜಿಯವರು ಕೂಡ ಇದ್ದು 12ನೇ ಸ್ಥಾನದಲ್ಲಿದ್ದಾರೆ. 
 
ಜತೆಗೆ ಪ್ರೆಸಿಡೆಂಟ್ ಆಫ್ ಇಂಡಿಯಾ ಪೇಜ್ ಎರಡನೇ ಸ್ಥಾನದಲ್ಲಿದೆ. ಥೈಲ್ಯಾಂಡ್‌ನ ವಿದೇಶಾಂಗ ಸಚಿವಾಲಯ ಈ ಸಾಲಿನಲ್ಲಿ ಮೊದಲಿದೆ.
 

ವೆಬ್ದುನಿಯಾವನ್ನು ಓದಿ