ಕೆಲವು ಸತ್ಯಗಳು ನನ್ನೊಂದಿಗೆ ಸಮಾಧಿಯಾಗಲಿವೆ: ಪ್ರಣವ್ ಮುಖರ್ಜಿ

ಶುಕ್ರವಾರ, 29 ಜನವರಿ 2016 (11:30 IST)
ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿಯಲ್ಲಿ ದೇವಸ್ಥಾನದ ಬಾಗಿಲು ತೆರೆದದ್ದು ಆಗ ಪ್ರಧಾನಿ ಆಗಿದ್ದ ರಾಜೀವ್‌ ಗಾಂಧಿ ಅವರ ಕೈಗೊಂಡ ತಪ್ಪು ನಿರ್ಧಾರ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಆತ್ಮಚರಿತ್ರೆಯ ಎರಡನೇ ಭಾಗವಾದ ‘ದ ಟರ್ಬುಲೆಂಟ್ ಇಯರ್ಸ್: 1980–96’ ಅನ್ನು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿಯವರಿಂದ ಗುರುವಾರ ಬಿಡುಗಡೆ ಮಾಡಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಬಾಬರಿ ಮಸೀದಿಯ ಧ್ವಂಸ ‘ಸಂಪೂರ್ಣ ನಂಬಿಕೆ ದ್ರೋಹದ ಕೆಲಸ. ಇದರಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದ್ದಷ್ಟೆ ಅಲ್ಲ ಜಾಗತಿಕ ಮಟ್ಟದಲ್ಲಿ ದೇಶದ ಘನತೆ ಕುಗ್ಗಿತು’ ಎಂದು ಪುಸ್ತಕದಲ್ಲಿ ಪ್ರಣವ್ ಹೇಳಿದ್ದಾರೆ.
 
ಪ್ರಣವ್ ಪ್ರಧಾನಿ ಪಟ್ಟಕ್ಕೆ ಅಪೇಕ್ಷಿಸಿದ್ದರು ಎಂಬುದನ್ನು ತಮ್ಮ ಆತ್ಮಚರಿತ್ರೆಯಲ್ಲಿ ನಿರಾಕರಿಸಿರುವ ಅವರು  ‘ಇಂದಿರಾ ಗಾಂಧಿ ಹತ್ಯೆಯ ನಂತರ ನಾನು ಪ್ರಧಾನಿಯಾಗಲು ಯತ್ನಿಸಿದ್ದೆ. ಆದರೆ ನನ್ನನ್ನು ನಿರ್ಲಕ್ಷಿಸಿ ರಾಜೀವ್‌ ಗಾಂಧಿ ಪ್ರಧಾನಿಯಾದರು ಎಂಬು ಸುಳ್ಳು ಪ್ರಚಾರ. ನಾನು ಪ್ರಧಾನಿ ಪಟ್ಟಕ್ಕೆ ಆಶೆ ಪಟ್ಟಿರಲಿಲ್ಲ ನೀವೆ ಪ್ರಧಾನಿಯಾಗಿ ಎಂದು ರಾಜೀವ್ ಗಾಂಧಿಯವರಿಗೆ ಸಲಹೆ ಕೊಟ್ಟವನೇ ನಾನೇ ಎಂದು ಅವರು ಉಲ್ಲೇಖಿಸಿದ್ದಾರೆ. 
 
ಇನ್ನೂ ಕೆಲವು ಸತ್ಯಗಳು ತಮ್ಮ ಜತೆಗೆ ಸಮಾಧಿಯಾಗುವುದು ಎಂದು ಮುಖರ್ಜಿ ಬರೆದುಕೊಂಡಿದ್ದು ಕುತೂಹಲಕ್ಕೆ ಎಡೆಮಾಡಿದೆ. 

ವೆಬ್ದುನಿಯಾವನ್ನು ಓದಿ