ಈ ಸಲ ರಾಷ್ಟ್ರಪತಿಯವರು ಮತದಾನ ಮಾಡುವುದಿಲ್ಲವಂತೆ

ಶುಕ್ರವಾರ, 9 ಮೇ 2014 (18:38 IST)
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಈಸಲದ ಲೋಕಸಭಾ ಚುನಾವಣೆಯಲ್ಲಿ ಮತದಾನ  
ಮಾಡುವುದಿಲ್ಲವಂತೆ. ಇದಕ್ಕೆ ಕಾರಣ ತಾವು ರಾಷ್ಟ್ರಪತಿಯಾಗಿದ್ದು ಯಾವುದೇ ಪಕ್ಷದ ಪರ ಇಲ್ಲ 
ಎಂಬುವ ಕಾರಣಕ್ಕೆ ತಾವು ಮತದಾನ  ಮಾಡುವುದಿಲ್ಲ ಎಂದು ಹೇಳಿದ್ದಾರೆ.   
 
ರಾಷ್ಟ್ರಪತಿಯವರು ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ , ಇದರ 
ಹಿಂದಿನ ಕಾರಣ ಅವರು ಪಕ್ಷಾತಿತರಾಗಿದ್ದಾರೆ. ಆದ ಕಾರಣ ಯಾವುದೇ ಪಕ್ಷವನ್ನು ಬೆಂಬಲಿಸುವುದು  
ಸಾಧ್ಯವಿಲ್ಲ ಎಂದು ರಾಷ್ಟ್ರಪತಿಯವರ ಮಾಧ್ಯಮ ವಕ್ತಾರ ರಾಜಮಣಿ ತಿಳಿಸಿದ್ದಾರೆ. ಇದಕ್ಕು ಮೊದಲು 
 
ಕೂಡ ರಾಷ್ಟ್ರಪತಿಯವರು ಮತದಾನ ಮಾಡಿಲ್ಲ ಎಂದು ರಾಜಮಣಿ ತಿಳಿಸಿದ್ದಾರೆ. 
ರಾಷ್ಟ್ರಪತಿಯವರು ದಕ್ಷಿಣ ಕೊಲ್ಕತ್ತಾದ ರಾಸಬಿಹಾರಿ ಕ್ಷೇತ್ರದ ಮತದಾರರಾಗಿದ್ದಾರೆ. ಇಲ್ಲಿ ಮೇ12 
ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಇದಕ್ಕು ಮೊದಲು ಕೂಡ ಕೆಲವು ರಾಷ್ಟ್ರಪತಿಗಳು 
ಮತದಾನದಿಂದ ದೂರ ಉಳಿದ ನಿದರ್ಶನಗಳಿವೆ.

ವೆಬ್ದುನಿಯಾವನ್ನು ಓದಿ