ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ: ಪಿಎಂಕೆ ಷರತ್ತು

ಶನಿವಾರ, 1 ಜುಲೈ 2017 (11:17 IST)
ಚೆನ್ನೈ:ತಿಂಗಳೊಳಗಾಗಿ ಕಾವೇರಿ ಮಂಡಳಿ ರಚಿಸಿದರೆ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ ಕೋವಿಂದ್ ಅವರನ್ನು ಬೆಂಬಲಿಸುವುದಾಗಿ  ಪಿಎಂಕೆ ಹೇಳಿದೆ.
 
ಈ ಬಗ್ಗೆ ಮಾತನಾಡಿರುವ ಪಿಎಂಕೆ ಅಧ್ಯಕ್ಷ ಎಸ್.ರಾಮದಾಸ್ ಅವರು, ಒಂದು ತಿಂಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಚನೆ ಮಾಡಬೇಕು. ಆಗ ಮಾತ್ರ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ ಕೋವಿಂದ್ ಗೆ ನಾವು ಬೆಂಬಲ ನೀಡುತ್ತೇವೆಂದು ಷರತ್ತು ವಿಧಿಸಿದ್ದಾರೆ.
 
ಬರಗಾಲಕ್ಕೆ ಕಳೆದ ವರ್ಷ 500 ರೈತರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಗೆ ಪ್ರಮುಖವಾಗಿರುವ ಕಾರಣಗಳಲ್ಲಿ ಕಾವೇರಿ ವಿವಾದ ಕೂಡ ಒಂದು ಎಂದು ಅವರು ಆರೋಪಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ಮಂಡಳಿ ರಚನೆ ಮಾಡುವುದರಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ. ತಮಿಳುನಾಡು ರಾಜ್ಯಕ್ಕೆ ಬಿಜೆಪಿ ಸರ್ಕಾರ ಯಾವಾಗಲೂ ವಂಚಿಸುತ್ತಲೇ ಇದೆ. ನೀಟ್, ಹಿಂದಿ ಹೇರಿಕೆ, ರೈಲ್ವೆ ಯೋಜನೆ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಅನ್ಯಾಯವೆಸಗುತ್ತಿದೆ ಎಂದು ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ