ಸಿಎಂಗೆ ಸಾಂಪ್ರದಾಯಿಕ ಗೌರವ ನೀಡದ್ದಕ್ಕೆ ಅರ್ಚಕನ ವರ್ಗಾವಣೆ

ಶನಿವಾರ, 4 ಜೂನ್ 2016 (18:27 IST)
ವಿಶ್ವ ಪ್ರಸಿದ್ಧ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ  ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೆ ಸಾಂಪ್ರದಾಯಿಕ ಗೌರವ ನೀಡಲು ನಿರಾಕರಿಸಿದ ಕಾರಣಕ್ಕೆ ಅರ್ಚಕ ಬಲ್ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ದೇವಸ್ಥಾನದ ಗರ್ಭಗುಡಿಯಲ್ಲಿ ಬಾದಲ್ ಅವರಿಗೆ ಶಿರೋ ವಸ್ತ್ರ ಸರ್‌ಪೋರಾ ನೀಡಲು ಅರ್ಚಕರು ನಿರಾಕರಿಸಿದ್ದರು. ಈ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. 
 
ಕಳೆದ ವರ್ಷ ಸಿಖ್ ಧರ್ಮಗ್ರಂಥ 'ಗ್ರಂಥ ಸಾಹಿಬ್‌' ಅನ್ನು ಅಪವಿತ್ರಗೊಳಿಸಿದ್ದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಸರಕಾರ ತಿರಸ್ಕಾರಯುತವಾಗಿ ವರ್ತಿಸಿದ್ದನ್ನು ವಿರೋಧಿಸಿ ತಾನು ಸಿಎಂಗೆ ಸರ್‌ಪೋರಾ ಗೌರವ ವಸ್ತ್ರ ನೀಡಲಿಲ್ಲ ಎಂದು ಬಲ್ಬೀರ್ ಸಿಂಗ್ ಹೇಳಿದ್ದಾರೆ. 
 
ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಇತ್ತೀಚಿಗೆ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ