ಪ್ರಧಾನಿ ಮೋದಿಯ ಕೃಷಿ ಮಂತ್ರ: "ಒಂದು ಹನಿ, ಹೆಚ್ಚು ಬೆಳೆ"

ಮಂಗಳವಾರ, 29 ಜುಲೈ 2014 (12:56 IST)
ನವದೆಹಲಿ:  ಸುಧಾರಿತ ನೀರಾವರಿ ವಿಧಾನಗಳಿಂದ  ಕೃಷಿ ಉತ್ಪಾದನೆಗೆ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕೃಷಿ ವಿಜ್ಞಾನಿಗಳಿಗೆ ಇಂದು ಸಲಹೆ ಮಾಡಿದರು.  "ಒಂದು ಹನಿ ,ಹೆಚ್ಚು ಬೆಳೆ" ಮಂತ್ರವಾಗಿಟ್ಟುಕೊಂಡಿರುವ ಮೋದಿ ಐಸಿಎಆರ್ 86ನೇ ಸಂಸ್ಥಾಪನಾ ದಿನದಲ್ಲಿ ಮಾತನಾಡುತ್ತಾ, ಗುಣಮಟ್ಟದೊಂದಿಗೆ ರಾಜಿ ಮಾಡದೇ ಉತ್ಪಾದನೆಗೆ ಹೆಚ್ಚು ವೇಗವಾಗಿ ಕೆಲಸ ಮಾಡಬೇಕು ಎಂದು ನುಡಿದರು.

ವೈಜ್ಞಾನಿಕ ಜ್ಞಾನವು ಜಮೀನಿನಲ್ಲಿರುವ ರೈತರನ್ನು ತಲುಪಬೇಕು ಎಂದು ಹೇಳಿದರು. ಒಂದು ಹನಿ ಹೆಚ್ಚು ಬೆಳೆ ನಮ್ಮ ಸಂಕಲ್ಪವಾಗಿದ್ದು, ಒಂದು ಹನಿ ನೀರನ್ನೂ ರೈತರು ಹಾಳುಮಾಡಬಾರದು ಎಂದು ನರೇಂದ್ರ ಮೋದಿ ಹೇಳಿದರು.. ರೈತರಿಗೆ ಬೇಕಾದ ಎಲ್ಲಾ ನೆರವು ನೀಡುತ್ತೇವೆ.ಪ್ರತಿಯೊಬ್ಬ ರೈತ ದೇಶಕ್ಕೆ ವರದಾನವಿದ್ದಂತೆ, ಬೆಳೆ ಬೆಳೆಯುವ ಅವಧಿಯನ್ನು ಕಡಿಮೆ ಮಾಡಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಉತ್ಪಾದನೆಯಾಗಬೇಕು ಎಂದು ಹೇಳಿದರು.  

ಒಂದು ಹನಿ ನೀರು ಕೂಡ ದುರುಪಯೋಗವಾಗಬಾರದು. ನೀರು ಪರಮಾತ್ಮ ನೀಡಿದ ಪ್ರಸಾದವಿದ್ದಂತೆ, ನೀರು ಪೋಲಾಗುವುದನ್ನು ತಡೆಯುವ ಅವಶ್ಯಕತೆ ಇದೆ. ಕೃಷಿ ಕ್ಷೇತ್ರದಲ್ಲಿ ವಿಜ್ಞಾನ, ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ಲ್ಯಾಬ್ ವಸ್ತುಗಳನ್ನು ಲ್ಯಾಂಡ್‌ಗೆ ತರುವ ಅವಶ್ಯಕತೆಯಿದೆ ಎಂದು ಮೋದಿ ಹೇಳಿದರು.  ತಂತ್ರಜ್ಞಾನದ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು. ಪ್ರಯೋಗಾಲಯದ ವಸ್ತುಗಳನ್ನು ಕೃಷಿಗೆ ತರುವ ಅಗತ್ಯವಿದೆ ಎಂದು ಪ್ರಧಾನಿ ನುಡಿದರು.

ಭಾರತದ ರೈತರು ರೇಡಿಯೋವನ್ನು ಬಹಳ ಕೇಳುವುದರಿಂದ ರೇಡಿಯೋ ಮಾಧ್ಯಮದಿಂದ ರೈತರನ್ನು ತಲುಪಬೇಕು. ಕೃಷಿ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು ಎಂದು ಮೋದಿ ಹೇಳಿದರು. ಭಾರತದ ರೈತರಲ್ಲಿ ಆತ್ಮವಿಶ್ವಾಸ ಬೆಳೆಸಬೇಕಾಗಿದೆ ಎಂದು ನುಡಿದರು.

ವೆಬ್ದುನಿಯಾವನ್ನು ಓದಿ