ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಲಿರುವ ಮೋದಿ

ಭಾನುವಾರ, 14 ಸೆಪ್ಟಂಬರ್ 2014 (17:10 IST)
ಸಪ್ಟಂಬರ್ 27 ರಂದು ಅಮೇರಿಕಾ ಪ್ರವಾಸ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ  ಮಾತನಾಡಲಿದ್ದಾರೆ ಎಂದು ಗೃಹ ಸಚಿವರಾದ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. 

ರಾಷ್ಟ್ರಪತಿ ಭವನದಲ್ಲಿ ಹಿಂದಿ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ  ಗೃಹ ಸಚಿವರು "ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದವರಲ್ಲಿ ಪೂರ್ವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೊದಲಿಗರಾಗಿದ್ದಾರೆ.
 
ನಾನು ಕೂಡ ಒಮ್ಮೆ ಸಂಯುಕ್ತ ರಾಷ್ಟ್ರ ಸಂಘದಲ್ಲಿ ಹಿಂದಿಯಲ್ಲಿ ಮಾತನಾಡಿದ್ದೆ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ  ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ಭೇಟಿ ಆಗಲಿರುವ ವಿದೇಶಿ ಗಣ್ಯರ ಜತೆಗೂ ಪ್ರಧಾನಿ ಹಿಂದಿಯಲ್ಲೇ ಮಾತನಾಡಲಿದ್ದಾರೆ" ಎಂದಾಗ ನೆರೆದ ಸಭಿಕರು ಚಪ್ಪಾಳೆಯ ಸುರಿಮಳೆಗರೆದರು.
 
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು. 
 
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪ್ರಧಾನಿ ಸೆ.27ರಂದು ಭಾಷಣ ಮಾಡುವ ನಿರೀಕ್ಷೆ ಇದೆ.
 
"ದೇಶದಲ್ಲಿನ ಪ್ರತಿಶತ 55 ಜನರು ಹಿಂದಿ ಭಾಷೆಯನ್ನು ಮಾತನಾಡುತ್ತಾರೆ ಮತ್ತು 85 ರಿಂದ 90 ಪ್ರತಿಶತ ಜನರು ತಮ್ಮ ಮಾತೃಭಾಷೆ ಬೇರೆಯಾಗಿದ್ದರು ಕೂಡ ಹಿಂದಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ". 
 
"ತಮ್ಮ ಮಾತೃಭಾಷೆ ಭಿನ್ನವಾಗಿದ್ದರು ಕೂಡ ಬಾಲಗಂಗಾಧರ ತಿಲಕ್, ಶ್ಯಾಮ ಪ್ರಸಾದ್ ಮುಖರ್ಜಿ, ಮಹಾತ್ಮ ಗಾಂಧಿ ಮತ್ತು ಎನ್. ಗೋಪಾಲಸ್ವಾಮಿ ಅಯ್ಯಂಗಾರ್ ಅವರಂತಹ ಮಹಾ ಪುರುಷರು ಹಿಂದಿ ಭಾಷೆ ಬಳಕೆಗೆ ಮತ್ತು ವಿಸ್ತರಣೆಯನ್ನು ಸಮರ್ಥಿಸಿದ್ದರು ಮತ್ತು ಉತ್ತೇಜಿಸಿದ್ದರು ಎಂದು ಸಿಂಗ್  ತಿಳಿಸಿದ್ದಾರೆ. 
 
"ಹಿಂದಿ ನಮ್ಮ ದೇಶದ  ಸಾಮಾನ್ಯ ಭಾಷೆ. ಸಂಸ್ಕೃತ ಎಲ್ಲ ಭಾರತೀಯ ಭಾಷೆಗಳ ತಾಯಿ. ಹಿಂದಿ ಮತ್ತು ಇತರ ಪಾದೇಶಿಕ ಭಾಷೆಗಳು ಸಹೋದರಿಯರು" ಎಂದು ಅವರು ಅಭಿಪ್ರಾಯ ಪಟ್ಟರು. 

ವೆಬ್ದುನಿಯಾವನ್ನು ಓದಿ