ಸೈತಾನನಿಗೆ ಲಾಲೂ ಅಡ್ರೆಸ್ ಸಿಕ್ಕಿದ್ದು ಹೇಗೆ: ಮೋದಿ ಪ್ರಶ್ನೆ

ಗುರುವಾರ, 8 ಅಕ್ಟೋಬರ್ 2015 (17:56 IST)
ಪಾಟ್ನಾ:  ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಬಿಹಾರದಲ್ಲಿ ಚುನಾವಣೆ ಪ್ರಚಾರ ಸಭೆಗಳಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನಿ ಮೋದಿ ಭಾಷಣದ ಕೆಲವು ಟಾಪ್ ಉಲ್ಲೇಖಗಳ ಪಟ್ಟಿ ಕೆಳಗಿದೆ
 
1. ಸೈತಾನನು ಲಾಲು ಪ್ರಸಾದ್‌ರನ್ನು ಪತ್ತೆಹಚ್ಚಿದ್ದು ಹೇಗೆ? ಸೈತಾನನಿಗೆ ಲಾಲೂ ಪ್ರಸಾದ್ ವಿಳಾಸ ಸಿಕ್ಕಿದ್ದು ಹೇಗೆ.  ಜನರು ತಮ್ಮ ಬಂಧುಗಳನ್ನು ಗುರುತಿಸುವ ರೀತಿಯಲ್ಲಿ ಲಾಲೂ ಸೈತಾನನ ಗುರುತು ಹಿಡಿದಿದ್ದಾರೆ ಎಂದು ಮೋದಿ ಹೇಳಿದರು. 
 
2. ಅನೇಕ ಚುನಾವಣೆಗಳನ್ನು ಬಡವರ ಹೆಸರಿನಲ್ಲಿ ಎದುರಿಸಲಾಗುತ್ತದೆ. ಆದರೆ ಯಾವ ಪ್ರಗತಿಯನ್ನೂ ಸಾಧಿಸಿರುವುದಿಲ್ಲ. ಈಗ ರಾಜ್ಯವು ವಿಕಾಸವಾದದತ್ತ ಸರಿಯುವುದಕ್ಕೆ ಬಿಹಾರವು ನಿರ್ಧರಿಸಿದೆ.
 
3. ಬಿಹಾರವು ಅಭಿವೃದ್ಧಿ ಹೊಂದಿದ ರಾಜ್ಯವಾದರೆ ಭಾರತವು ಜಗತ್ತಿನಲ್ಲೇ ನಂ.1 ರಾಷ್ಟ್ರವಾಗುತ್ತದೆ. 4. ರಾಮಮನೋಹರ ಲೋಹಿಯಾ ಸಿದ್ಧಾಂತ ಕುರಿತು ಮಾತನಾಡುತ್ತಿದ್ದ ಜನರು ಈಗ ಕಾಂಗ್ರೆಸ್ ನೀರು ಕುಡಿದು ನಮ್ಮನ್ನು ನಿಂದಿಸುತ್ತಿದ್ದಾರೆ.
 
5. ಯದುವಂಶಿಗಳು ಭಾರತಕ್ಕೆ ಶ್ವೇತ ಕ್ರಾಂತಿಯನ್ನು ನೀಡಿದರು. ನೋಡಿ ನಾಯಕರೊಬ್ಬರು ಯದುವಂಶವನ್ನು ಹೇಗೆ ಅವಮಾನಿಸುತ್ತಿದ್ದಾರೆ.
6. ಬಿಹಾರ ಚುನಾವಣೆ ಫಲಿತಾಂಶ ಕುರಿತು ಯಾವುದೇ ಪ್ರಶ್ನೆಗಳಿಲ್ಲ. ಎನ್‌ಡಿಎಯನ್ನು ಅಧಿಕಾರಕ್ಕೆ ತರಲು ಬಿಹಾರ ನಿರ್ಧರಿಸಿದೆ. 
 
7. ಈ ಮಹಾಸ್ವಾರ್ಥಬಂಧನ ಏನೂ ಅಲ್ಲ, ಅದು ಬಿಗ್ ಬಾಸ್ ಮನೆಯಿದ್ದ ಹಾಗಿದೆ.
8.  ನೀವು ವೋಟ್ ಮಾಡುವುದಕ್ಕೆ ಮುಂಚೆ ನಿಮ್ಮನ್ನು ಪ್ರಶ್ನಿಸಿಕೊಳ್ಳಿ, ಈ ಮಹಾಸ್ವಾರ್ಥಬಂಧನವು ಬಿಹಾರಕ್ಕೆ 60 ವರ್ಷಗಳಲ್ಲಿ ಏನನ್ನಾದರೂ ಮಾಡಿದೆಯಾ? ಎಂದು ಮೋದಿ ಕೇಳಿದರು. 

ವೆಬ್ದುನಿಯಾವನ್ನು ಓದಿ