ಮೋದಿಯ ನಿಜವಾದ ಶಕ್ತಿ ಮನೋದಾರ್ಢ್ಯತೆ: ಹಾಡಿಹೊಗಳಿದ ಜೇಟ್ಲಿ

ಸೋಮವಾರ, 24 ನವೆಂಬರ್ 2014 (12:45 IST)
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹಾನ್ ಕ್ರೀಡಾಪಟುಗಳ ರೀತಿಯಲ್ಲಿ ದೃಢಮಸ್ಸನ್ನು ಹೊಂದಿರುವುದು ಅವರ ಶಕ್ತಿಯಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಗುಣಗಾನ ಮಾಡಿದ್ದಾರೆ. ಎಲ್ಲಾ ಅಡೆತಡೆಗಳನ್ನು ದಾಟಿ ಹೇಗೆ ಅವರು ಉನ್ನತ ಹುದ್ದೆಗೆ ಏರಿದರೆಂಬುದನ್ನು ಜೇಟ್ಲಿ ವಿವರಿಸಿದರು. 
 
15 ವರ್ಷಗಳ ಹಿಂದೆ ಬಿಜೆಪಿ ವಕ್ತಾರರಾಗಿದ್ದ ದಿನದಿಂದಲೂ ಪ್ರಧಾನಿ ಮೋದಿಯನ್ನು ಸೂಕ್ಷ್ಮವಾಗಿ ಗಮನಿಸಿದ ಜೇಟ್ಲಿ, ಅವರೊಬ್ಬ ಕಠಿಣ ಶಿಸ್ತಿನ ಸಿಪಾಯಿಯಾಗಿದ್ದು, ಪ್ರಬಲವಾದ ಆತ್ಮವಿಶ್ವಾಸ ಹೊಂದಿದ್ದಾರೆಂದೂ ಈ ಗುಣಗಳಿಂದಲೇ ಅವರು ವಿರುದ್ಧ ದೃಷ್ಟಿಕೋನಗಳ ನಡುವೆಯೂ ಅಭಿವೃದ್ಧಿಯ ಕಾರ್ಯಸೂಚಿಯನ್ನು ಮುಂದಕ್ಕೆ ಒಯ್ಯುತ್ತಿದ್ದು, ರಾಜಕೀಯ ರಂಗದಲ್ಲಿ ಅಕ್ಷರಶಃ ಸರಿಗಟ್ಟುವವರಿಲ್ಲದ ವ್ಯಕ್ತಿಯಾಗಿದ್ದಾರೆ.

 ಸರ್ಕಾರದಲ್ಲಿ ಕೂಡ ಶ್ರಮಜೀವಿಯಾಗಿದ್ದು, ಚಟುವಟಿಕೆ ಆಧಾರಿತ ದೃಷ್ಟಿಕೋನ ಹೊಂದಿದ್ದಾರೆ. ಸರ್ಕಾರದ ಪ್ರತಿಯೊಂದು ಇಲಾಖೆ ಯಾವ ಕೆಲಸ ಮಾಡಬೇಕೆಂಬ ಬಗ್ಗೆ ಅವರಿಗೆ ಸ್ಪಷ್ಟತೆಯಿದೆ ಎಂದು ಜೇಟ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಪ್ರಧಾನಿಯನ್ನು ಹೊಗಳಿದರು. ಮೋದಿಯ ವಿಕಾಸದ ಬಗ್ಗೆ ಮಾತನಾಡುತ್ತಾ, ಅವರು ಅತ್ಯಂತ ತೀಕ್ಷ್ಣಸ್ವಭಾವದ, ಮಹಾನ್ ಕಲಿಕಾಕಾಂಕ್ಷಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ನಾಯಕನಿಗೆ ಹೊಂದಿಕೊಳ್ಳುವ ಸಾಮರ್ಥ್ಯವುಳ್ಳವರು ಎಂದು ಜೇಟ್ಲಿ ಶ್ಲಾಘಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ