ಒಬಾಮಾ ದಂಪತಿಗಳಿಗೆ ಪ್ರಧಾನಿ ಮೋದಿಯಿಂದ ಆತ್ಮೀಯ ಸ್ವಾಗತ

ಭಾನುವಾರ, 25 ಜನವರಿ 2015 (11:41 IST)
ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಪತ್ನಿ ಮಿಶೆಲ್‌ ಜತೆ ಇಂದು ಬೆಳಗ್ಗೆ 9.45 ಕ್ಕೆ ಗಂಟೆಗೆ ದೆಹಲಿಗೆ ಆಗಮಿಸಿದರು.
 
 ದೆಹಲಿಯ ಪಾಲಂ ವಾಯುನೆಲೆಯಲ್ಲಿ ವಿಶೇಷ ವಿಮಾನದಲ್ಲಿ ಬಂದಿಳಿದ ಒಬಾಮಾ ಅವರನ್ನು ಪ್ರಧಾನಿ ಮೋದಿ ಶಿಷ್ಟಾಚಾರಗಳನ್ನೆಲ್ಲಾ ಬದಿಗೊತ್ತಿ ಖುದ್ದಾಗಿ ಸ್ವಾಗತಿಸಿದರು.
 
ಸಿಗದಿತ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ಪತ್ನಿ ಮಿಶೆಲ್‌ ಸಮೇತರಾಗಿ ವಿಮಾನದಿಂದ ಇಳಿದ ಒಬಾಮಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಆಲಂಗಿಸಿ ಕುಶಲೋಪರಿ ವಿಚಾರಿಸಿದರು.
 
ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಒಬಾಮ ದಂಪತಿ ಕೆಲ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
 
ಒಬಾಮಾ ಇಂದಿನ ಕಾರ್ಯಕ್ರಮ : 
 
ಮಧ್ಯಾಹ್ನ 12.00:  ರಾಷ್ಟ್ರಪತಿ ಭವನದಲ್ಲಿ ಗೌರವವಂದನೆ ಸ್ವೀಕಾರ.
 
ಮಧ್ಯಾಹ್ನ12.40 : ಮಹಾತ್ಮ ಗಾಂಧಿ ಸಮಾಧಿ ಸ್ಥಳ ರಾಜ್‌ಘಾಟ್‌ಗೆ ತೆರಳಿ ಗೌರವ ಸಮರ್ಪಣೆ. ಭೇಟಿ ಸ್ಮರಣಾರ್ಥ ಸಸಿ ನೆಡುವಿಕೆ.
 
ಮಧ್ಯಾಹ್ನ2.45 : ಔತಣ ಕೂಟದ ಬಳಿಕ ಪ್ರಧಾನಿ ಮೋದಿ ಜತೆ ನಡೆದಾಡುತ್ತಲೇ ಮಾತುಕತೆ (ವಾಕ್‌ ಆ್ಯಂಡ್‌ ಟಾಕ್‌).ಅದಾದ ಬಳಿಕ ದ್ವಿಪಕ್ಷೀಯ ಮಟ್ಟದ ಮಾತುಕತೆ.
 
ಸಂಜೆ:4.10 : ಒಬಾಮಾ- ಮೋದಿಯಿಂದ ಜಂಟಿ ಪತ್ರಿಕಾಗೋಷ್ಠಿ.
 
ರಾತ್ರಿ 7.35: ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ, ಕುಟುಂಬ ವರ್ಗದವರೊಂದಿಗೆ ಸಮಾಲೋಚನೆ.
 
ರಾತ್ರಿ 7.50 : ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಔತಣ ಕೂಟದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಭವನಕ್ಕೆ ಪ್ರಯಾಣ

ವೆಬ್ದುನಿಯಾವನ್ನು ಓದಿ