ಆಸ್ಟ್ರೇಲಿಯಾ ಜನತೆಗೆ ಶುಭಾಷಯ ಕೋರಿದ ಪ್ರಧಾನಿ ಮೋದಿ

ಸೋಮವಾರ, 26 ಜನವರಿ 2015 (14:20 IST)
ಆಸ್ಟ್ರೇಲಿಯಾ ರಾಷ್ಟ್ರೀಯ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಸಿಸ್ ಜನತೆಗೆ ಸೋಮವಾರ ಶುಭಾಶಯ ಕೋರಿದ್ದಾರೆ.
 
ಜನವರಿ 26ರ ಗಣರಾಜ್ಯೋತ್ಸವದ ಆಚರಣೆಯಲ್ಲಿ ಹಾಜರಿದ್ದ ಪ್ರಧಾನಿ ಮೋದಿಯವರು, ನವೆಂಬರ್ ತಿಂಗಳಲ್ಲಿ ನಾನು ಆಸ್ಟ್ರೇಲಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನತೆ ನನ್ನನ್ನು ಪ್ರೀತಿಯಿಂದ ಹಾಗೂ ಅಭಿಮಾನದಿಂದ ನೋಡಿಕೊಂಡ ರೀತಿ ಈಗಲೂ ನೆನಪಿಗೆ ಬರುತ್ತದೆ ಎಂದು ಹೇಳಿದ್ದಾರೆ.
 
1788ರ ಜನವರಿ 26 ರಂದು ಬ್ರಿಟಿಷ್ ಪಡೆಗಳು ವಸಾಹತು ಸ್ಥಾಪಿಸಲು ಆಸ್ಟ್ರೇಲಿಯಾಗೆ ಆಗಮಿಸಿದ ದಿವಸವಾಗಿದ್ದು, ಈ ದಿನವನ್ನು ಆಸ್ಟ್ರೇಲಿಯಾದಾದ್ಯಂತ ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತದೆ.
 

ವೆಬ್ದುನಿಯಾವನ್ನು ಓದಿ