ಮೇರಿಕೋಮ್‌ಗೆ ಚಿನ್ನದ ಪದಕ: ದಟ್ಸ್ ವುಮೆನ್ ಪವರ್ ಎಂದ ನಟಿ ಪ್ರಿಯಾಂಕಾ ಚೋಪ್ರಾ

ಬುಧವಾರ, 1 ಅಕ್ಟೋಬರ್ 2014 (16:44 IST)
ಏಷ್ಯನ್ ಗೇಮ್ಸ್ ಬಾಕ್ಸಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೇರಿಕೋಮ್ ನಿಜವಾದ ಚಾಂಪಿಯನ್ ಎಂದು ಬಾಲಿವುಡ್ ನಟಿ ಮೇರಿಕೋಮ್ ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ಅಭಿನಂದಿಸಿದ್ದಾರೆ.
 
ದೀರ್ಘಾವಧಿಯಿಂದ ನಾನು ಮೇರಿಕೋಮ್ ಅಭಿಮಾನಿಯಾಗಿದ್ದೇನೆ. ಮೇರಿಕೋಮ್ ಜನಿಸಿದ ದೇಶದಲ್ಲಿ ನಾನು ಜನಿಸಿರುವುದಕ್ಕೆ ಹೆಮ್ಮೆಯೆನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
 
ಏಷ್ಯನ್ ಗೇಮ್ಸ್ ಬಾಕ್ಸಿಂಗ್ ವಿಭಾಗದಲ್ಲಿ ಮೇರಿಕೋಮ್ 51ಕೆಜಿ ವಿಭಾಗದಲ್ಲಿ ಕಜಕಿಸ್ತಾನ್ ಎದುರಾಳಿ ಝೈನಾ ಶೇಕೆರ್‌ಬೆಕೋವಾ ಅವರನ್ನು ಸೋಲಿಸಿ ಚಿನ್ನದ ಪದಕ ಪಡೆದ ದೇಶದ ಮೊದಲ ಮಹಿಳಾ ಬಾಕ್ಸರ್ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.   
 
ದಟ್ಸ್ ವುಮೆನ್ ಪವರ್ ಮೇರಿಕೋಮ್‌ಗೆ ಚಿನ್ನದ ಪದಕ ಮೇಕ್ಸ್ ಇಂಡಿಯಾ ಪ್ರೌಡ್ ಯಾಹೂ ಎಂದು ಬಾಲಿವುಡ್ ಪ್ರಿಯಾಂಕಾ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. 
 

ವೆಬ್ದುನಿಯಾವನ್ನು ಓದಿ