ವೇಶ್ಯಾವಾಟಿಕೆ: ಪೊಲೀಸರಿಂದ ಕ್ಲೀನ್ ಚಿಟ್ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ಶುಕ್ರವಾರ, 28 ನವೆಂಬರ್ 2014 (16:05 IST)
ಸ್ಪಾ ನಡೆಸಲೆಂದು ಗುತ್ತಿಗೆ ಪಡೆದಿದ್ದ ಕಟ್ಟಡದಲ್ಲಿ ಆರೋಪಿಗಳು ವೇಶ್ಯಾವಾಟಿಕೆ ನಡೆಸುತ್ತಿದ್ದುದರ ಬಗ್ಗೆ ಅದರ ಮಾಲೀಕರಾದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಯಾವ ಮಾಹಿತಿಯೂ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಸೆಕ್ಸ್ ದಂಧೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಮುಂಬೈ ಪೊಲೀಸರು ವರ್ಸೋವಾ ಪ್ರದೇಶದ ಸ್ಪಾ ಒಂದರ ಮೇಲೆ ದಾಳಿ ನಡೆಸಿದ್ದರು.ಸ್ಪಾ ಬಗೆಗಿನ ತನಿಖೆ ಮುಂದುವರೆದಂತೆ ಆ ಕಟ್ಟಡ ಬಾಲಿವುಡ್‘ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಹೆಸರಿನಲ್ಲಿರುವುದು ಪತ್ತೆಯಾಗಿತ್ತು.
 
ಸ್ಪಾ ನಡೆಸಲೆಂದು ಪ್ರಿಯಾಂಕಾ ಅವರಿಂದ ಕಟ್ಟಡವನ್ನು ಗುತ್ತಿಗೆಗೆ ಪಡೆದಿದ್ದ ಮಾಣಿಕ್ ಸೋನಿ ಎಂಬುವವರು ಅಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ಪತ್ತೆಯಾಗಿತ್ತು.
 
ಈ ಪ್ರಕರಣದಲ್ಲಿ ಪ್ರಿಯಾಂಕಾರವರ ಪಾಲ್ಗೊಳ್ಳುವಿಕೆ ಇಲ್ಲ, ನಟಿ ಮತ್ತು ಆಕೆಯ ತಾಯಿಗೆ ಕ್ಲೀನ್ ಚೀಟ್ ನೀಡಲಾಗಿದೆ ಎಂದು ಹೆಸರು ಹೇಳಲು ನಿರಾಕರಿಸಿದ ವಾರ್ಸೋವಾ ಪೊಲೀಸ್ ಠಾಣೆಯ ಪೇದೆಯೊಬ್ಬರು ತಿಳಿಸಿದ್ದಾರೆ.
 
ಈ ಕಟ್ಟಡದ ಸಮೀಪದಲ್ಲೇ ಪ್ರಿಯಾಂಕಾ ತಾಯಿಯ ಕ್ಲಿನಿಕ್ ಕೂಡ ಇದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ